×
Ad

5 ಟಿ.ವಿ. ಚಾನಲ್‌ಗಳಲ್ಲಿ ರಂಝಾನ್ ಕುರಿತ ಪ್ರಭಾಷಣ ಪ್ರಸಾರ

Update: 2016-06-05 20:50 IST

ಮಂಗಳೂರು, ಜೂ. 5: ಸಿಲ್‌ಸಿಲಾ ಮೀಡಿಯಾದ ವತಿಯಿಂದ ಹಾಗೂ ರೀಡ್‌ಪ್ಲಸ್ ಮತ್ತು ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಸಹಕಾರದೊಂದಿಗೆ ನಡೆಸಲ್ಪಡುವ ರಂಝಾನ್ ಚಾನಲ್ ಕಾರ್ಯಕ್ರಮದ 9ನೆ ವರ್ಷದ ರಂಝಾನ್ ತಿಂಗಳಲ್ಲಿ ಕರಾವಳಿ ಪ್ರದೇಶದ 5 ಚಾನಲ್‌ಗಳಲ್ಲಿ ಹಾಗೂ islamic  silsila media website ನಲ್ಲಿ ಇಸ್ಲಾಮಿಕ್ ಪ್ರಭಾಷಣಗಳು ಪ್ರಸಾರವಾಗಲಿದೆ.

ವಿ4ನ್ಯೂಸ್ ಚಾನಲ್‌ನಲ್ಲಿ ‘ರಂಝಾನ್ ಸಿಲ್‌ಸಿಲಾ’ ಕಾರ್ಯಕ್ರಮವು ಪ್ರತಿದಿನ ರಾತ್ರಿ 10ರಿಂದ 10.45 ತನಕ ಪ್ರಸಾರಗೊಂಡು ಮರುದಿನ ಮಧ್ಯಾಹ್ನ 2.45 ರಿಂದ 3.30 ತನಕ ಮರುಪ್ರಸಾರವಾಗಲಿದೆ. ಪ್ರತಿದಿನ ಬೆಳಗ್ಗೆ 10.30 ರಿಂದ 11.30ರ ತನಕ ದೇವರ್‌ಶೋಲ ಉಸ್ತಾದರ ಆಧ್ಯಾತ್ಮಿಕ ಪ್ರಭಾಷಣ ಪ್ರಸಾರಗೊಳ್ಳಲಿದೆ.

‘ಡಾಜಿ ವರ್ಲ್ಡ್’ ಚಾನೆಲ್‌ನಲ್ಲಿ ಪ್ರತಿದಿನ ಬೆಳಗ್ಗೆ 11:30ರಿಂದ 12ರ ತನಕ ‘ರಂಝಾನ್ ಬಯಾನ್’ ಕಾರ್ಯಕ್ರಮ ಪ್ರಸಾರಗೊಂಡು ಅದೇ ದಿನ ಮಧ್ಯಾಹ್ನ 2:30ರಿಂದ 3ರ ತನಕ ಮರುಪ್ರಸಾರಗೊಳ್ಳಲಿದೆ.

‘ಪೊಸ ಕುರಲ್’ ಚಾನೆಲ್‌ನಲ್ಲಿ ‘ರಂಝಾನ್ ವೀವ್’ ಕಾರ್ಯಕ್ರಮ ಪ್ರತಿದಿನ ಬೆಳಗ್ಗೆೆ 11:30ರಿಂದ 12:30 ರ ತನಕ ಪ್ರಸಾರಗೊಂಡು ಅದೇದಿನ ಸಂಜೆ 5 ರಿಂದ 6ರತನಕ ಮರುಪ್ರಸಾರಗೊಳ್ಳಲಿದೆ.

‘ಅಬ್ಬಕ್ಕ ಟಿವಿ’ ಚಾನಲ್‌ನಲ್ಲಿ ‘ರಂಝಾನ್ ವಾಯ್ಸ’ ಕಾರ್ಯಕ್ರಮ ಪ್ರತಿದಿನ ಮಧ್ಯಾಹ1:30 ರಿಂದ 2:30 ರ ತನಕ ಪ್ರಸಾರಗೊಂಡು ಅದೇದಿನ 7:15 ರಿಂದ 8:15 ರ ತನಕ ಮರುಪ್ರಸಾರಗೊಳ್ಳಲಿದೆ.

ಉತ್ತರ ಕರ್ನಾಟಕದ ನೂತನ ಟಿವಿಯಲ್ಲಿ ರಂಝಾನ್ ನಸೀಹತ್ ಕಾರ್ಯಕ್ರಮ ಪ್ರತಿದಿನ 7.45 ರಿಂದ 8.15 ರ ತನಕ ಪ್ರಸಾರಗೊಂಡು ಮರುದಿನ 2:45 ರಿಂದ 3 ರ ತನಕ ಮರುಪ್ರಸಾರವಾಗಿದೆ.

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಕರ್ನಾಟಕ, ಕೇರಳದ ಸುಪ್ರಸಿದ್ಧ ಭಾಷಣಕಾರರು ಭಾಗವಸಲಿದ್ದು, ವಿಶ್ವದಾದ್ಯಂತ www.islamicsilsilamedia ಮುಖಾಂತರ ಲೈವ್ ಆಗಿ ವೀಕ್ಷಿಸಬಹುದಾಗಿದೆ.

 silsilamedia ಎಂಬ ಆ್ಯಪ್‌ನ್ನು ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ ಮೊಬೈಲ್ ಮೂಲಕ ವೀಕ್ಷಿಸಬಹುದಾಗಿದೆ ಹಾಗೂ ದಿನಂಪ್ರತಿ ಚಾನಲ್ ಕ್ವಿಝ್ ಕಾರ್ಯಕ್ರಮ ನಡೆಯಲಿದ್ದು, ಉತ್ತರಿಸಿ ದೈನಂದಿನ ಬುರ್ಖಾ ಫ್ಯಾಶನ್ ಬಹುಮಾನ ಗಳಿಸಬಹುದು ಎಂದು ಸಿಲ್‌ಸಿಲಾ ಮೀಡಿಯಾ ಡೈರಕ್ಟರ್ ಪಿ.ಎಸ್.ಮುಹಮ್ಮದ್ ಸಖಾಫಿ ಪಾಣೆಮಂಗಳೂರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News