ರಾಷ್ಟ್ರಪತಿ ಹುದ್ದೆಗೆ ಪ್ರಧಾನಿ ಮೋದಿಯ ಪಟ್ಟಿಯಲ್ಲಿ ಅಚ್ಚರಿಯ ಹೆಸರು?

Update: 2016-06-06 07:34 GMT

ಪ್ರಣವ್ ಮುಖರ್ಜಿ ಮತ್ತೊಂದು ಅವಧಿಗೆ ರಾಷ್ಟ್ರಪತಿಯಾಗಲು ಬಯಸುತ್ತಿಲ್ಲ. ಹಾಗೆಂದು ಅವರೇ ತಮ್ಮ ಆಪ್ತವರ್ಗದಲ್ಲಿ ಹೇಳಿದ್ದಾರೆ. ಬಿಜೆಪಿ ಅವರನ್ನು ಮತ್ತೊಂದು ಅವಧಿಗೆ ನಾಮನಿರ್ದೇಶನ ಮಾಡುವ ಸಾಧ್ಯತೆಯೇ ಕಡಿಮೆ ಇದೆ.

80 ವರ್ಷದ ಮುಖರ್ಜಿ ಅವಧಿ ಮುಂದಿನ ಜುಲೈಗೆ ಮುಗಿಯಲಿದೆ. ಅವರು ಈಗಾಗಲೇ ತಮ್ಮ ಪೇಪರ್ ಗಳು ಮತ್ತು ರಾಷ್ಟ್ರಪತಿಯಾಗಿದ್ದಾಗ ಸಿಕ್ಕ ಉಡುಗೊರೆಗಳನ್ನು ಪ್ರತ್ಯೇಕಿಸುತ್ತಿದ್ದಾರೆ. ಎನ್‌ಡಿಎ ಇನ್ನೂ ಅವರಿಗೆ ಬದಲಿ ಆಯ್ಕೆ ಮಾಡಿಲ್ಲ.

ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಹೆಸರು ಕೇಳಿಬರುತ್ತಿದೆಯಾದರೂ ಪನಾಮ ಪೇಪರ್ಸ್‌ ಬಹಿರಂಗದ ನಂತರ ಆ ಸಾಧ್ಯತೆ ತಳ್ಳಿಹಾಕಲಾಗಿದೆ. ಶರದ್ ಪವಾರ್ ಎಲ್ಲ ಪಕ್ಷಗಳೂ ಒಪ್ಪಿಕೊಳ್ಳುವ ಸೂಕ್ತ ಅಭ್ಯರ್ಥಿಯಾಗಲಿದ್ದಾರೆ ಎಂದೂ ಹೇಳಲಾಗಿದೆ.

ಅಂತಿಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಆರ್‌ಎಸ್‌ಎಸ್ ಜೊತೆಗೆ ಮಾತನಾಡಿ ನಿರ್ಧರಿಸಲಿದ್ದಾರೆ. ಸಭಾಪತಿ ಸುಮಿತ್ರಾ ಮಹಾಜನ್, ಮೋದಿ ಸರ್ಕಾರದ ದಲಿತ ಮುಖ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ಸಚಿವರಾದ ತವಾರ್ ಚಂದ್ ಗೆಹ್ಲೊಟ್ ಮತ್ತು ರಾಜ್ಯಪಾಲರಾಗಿರುವ ರಾಮ್ ನಾಯ್ಕೊ ಮತ್ತು ಮೊದಲ ಬುಡಕಟ್ಟು ರಾಜ್ಯಪಾಲೆ ದ್ರೌಪದಿ ಮುರ್ಮು ಅವರ ಹೆಸರು ಕೇಳಿ ಬರುತ್ತಿದೆ.

ಕೃಪೆ: http://indianexpress.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News