ಎನ್‌ಎಸ್‌ಜಿ ಸೇರುವ ಭಾರತದ ಯತ್ನಕ್ಕೆ ಚೀನಾ ಅಡ್ಡಗಾಲು

Update: 2016-06-07 14:24 GMT

ವಾಶಿಂಗ್ಟನ್, ಜೂ. 7: ಮೂರು ದಿನಗಳ ಭೇಟಿಗಾಗಿ ಪ್ರಧಾನಿ ನರೇಂದ್ರ ಮೋದಿ ವಾಶಿಂಗ್ಟನ್‌ನಲ್ಲಿ ಇಳಿಯುತ್ತಿರುವಂತೆಯೇ, ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಪ್ರವೇಶ ಪಡೆಯುವ ಭಾರತದ ಯತ್ನಕ್ಕೆ ಹಿನ್ನಡೆಯಾಗಿದೆ.

ಗುಂಪಿಗೆ ಭಾರತವನ್ನು ಸೇರಿಸುವ ನಿಟ್ಟಿನಲ್ಲಿ ಚೀನಾದ ಮೇಲೆ ಅಮೆರಿಕ ಒತ್ತಡ ಹಾಕುತ್ತದೆ ಎನ್ನುವ ನಿರೀಕ್ಷೆಯನ್ನು ಭಾರತ ಹೊಂದಿತ್ತು. ಆದರೆ, ಬೀಜಿಂಗ್‌ನಲ್ಲಿ ನಡೆದ ಅಮೆರಿಕ-ಚೀನಾ ವ್ಯೆಹಾತ್ಮಕ ಹಾಗೂ ಆರ್ಥಿಕ ಮಾತುಕತೆ ಈ ವಿಷಯದಲ್ಲಿ ಭರವಸೆಯೊಂದಿಗೆ ಮುಕ್ತಾಯಗೊಂಡಿಲ್ಲ ಎನ್ನಲಾಗಿದೆ.

ಅಮೆರಿಕದ ಒತ್ತಡಕ್ಕೆ ಚೀನಾ ಸೂಕ್ತವಾಗಿ ಸ್ಪಂದಿಸಿಲ್ಲ ಎನ್ನಲಾಗಿದೆ. 48 ದೇಶಗಳ ಪರಮಾಣು ಪೂರೈಕೆದಾರರ ಗುಂಪಿಗೆ ಭಾರತವನ್ನು ಸೇರಿಸುವ ವಿಷಯದಲ್ಲಿ ಚೀನಾ ತನ್ನ ನಿಲುವನ್ನು ಬದಲಾಯಿಸಿಲ್ಲ ಎನ್ನುವುದನ್ನು ಸುದ್ದಿಗೋಷ್ಠಿಯಲ್ಲಿ ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಪರಮಾಣು ಪ್ರಸರಣ ನಿಷೇಧ ಒಪ್ಪಂದಕ್ಕೆ ಭಾರತ ಸಹಿ ಹಾಕುವುದನ್ನು ಇದು ಅವಲಂಬಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News