ದಅ್ವಾ ಪ್ರಥಮ ವಾರ್ಷಿಕ ಪರೀಕ್ಷೆ: ಮುಹಮ್ಮದ್ ಹನೀಫ್ ಬೋಳಂತೂರು ಪ್ರಥಮ
Update: 2016-06-07 20:05 IST
ಮಂಗಳೂರು, ಜೂ. 7: ಎಸ್‌ಕೆಎಸ್‌ಎಂ ಅಧೀನ ಸಂಸ್ಥೆಯಾದ ಸಲಫಿ ಎಜುಕೇಶನ್ ಬೋರ್ಡ್ (ಎಸ್‌ಇಬಿ) ವತಿಯಿಂದ ನಡೆಯುತ್ತಿರುವ ದಅ್ವಾ ಕಾಲೇಜಿನ ಪ್ರಥಮ ವಾರ್ಷಿಕ ಪರೀಕ್ಷೆಯಲ್ಲಿ ಮುಹಮ್ಮದ್ ಹನೀಫ್ ಬೋಳಂತೂರು ಪ್ರಥಮ ಹಾಗೂ ಮುಹಮ್ಮದ್ ಅನೀಸ್ ಬೋಳಂತೂರು ದ್ವಿತೀಯ ರ್ಯಾಂಕ್ ಪಡೆದಿದ್ದಾರೆ ಎಂದು ಸಲಫಿ ವಿದ್ಯಾಭ್ಯಾಸ ಮಂಡಳಿಯ ಅಧ್ಯಕ್ಷ ವೌಲವಿ ಮುಸ್ತಫಾ ದಾರಿಮಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.