×
Ad

ಕೊರ್ವಾದಿಂದ ಶಾಲಾಬ್ಯಾಗ್‌ಗಳ ವಿತರಣೆ

Update: 2016-06-07 20:18 IST

ಮಂಗಳೂರು, ಜೂ.7:· ಕಲ್ಯಾಣಪುರ ಮಿಲಾಗ್ರಿಸ್ ಶಾಲೆಯ ಕೊಂಕಣ್ ಓವರ್‌ಸೀಸ್ ರಿಟರ್ನಿಸ್ ವೆಲ್‌ಫೇರ್ ಅಸೋಸಿಯೇಶನ್ (ಕೊರ್ವಾ) ಸಂಘಟನೆಯ ವತಿಯಿಂದ ಸುಮಾರು 650 ಅರ್ಹ ವಿದ್ಯಾರ್ಥಿಗಳಿಗೆ ಶಾಲಾಬ್ಯಾಗ್‌ಗಳ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಉಡುಪಿ ತಾಲೂಕಿನ ಕಲ್ಯಾಣಪುರದ ಸಂತ ಜೊಸೆಫ್, ಎಲ್‌ವಿಪಿ ಹಿರಿಯ ಪ್ರಾಥಮಿಕ ಮುಂತಾದ ಶಾಲೆಗಳ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಶಾಲಾಬ್ಯಾಗ್‌ಗಳನ್ನು ವಿತರಿಸಲಾಯಿತು.

ಸಂತ ಜೋಸೆಫ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಸುಶೀಲಾ ಮೊಂತೇರೊ ಸ್ವಾಗತಿಸಿದರು.

ಕೊರ್ವಾ ಸಂಸ್ಥೆಯ ಅಧ್ಯಕ್ಷ ಲೂಯಿಸ್ ಲೋಬೊ ಸಂಘಟನೆಯ ಬಗ್ಗೆ ಹಾಗೂ ಅದರ ಧ್ಯೇಯಗಳ ಬಗ್ಗೆ ವಿವರಿಸಿದರು. ಮಿಲಾಗ್ರಿಸ್ ಕಾಥೆದ್ರಾಲ್ ರೆಕ್ಟರ್ ಫಾ.ಸ್ಟ್ಯಾನಿ ಬಿ. ಲೋಬೊ ಮುಖ್ಯ ಅತಿಥಿಯಾಗಿದ್ದರು. ಎಲ್‌ವಿಪಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರೊ. ಮಸ್ಕರೇನ್ಹಸ್ ವಂದಿಸಿದರು. ಕೊರ್ವಾ ಸಂಸ್ಥೆಯ ಜೆಸ್ಸಿ ಪಿಂಟೊ, ರೊನಾಲ್ಡ್ ಗೋಮ್ಸ್, ಡೆವಿಡ್ ಡಿಸೋಜಾ, ಲಾರೆನ್ಸ್ ಲೋಬೊ, ವಿಕ್ರಮ್ ಕುಟಿನ್ಹಾ ಮತ್ತಿತರ ಗಣ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News