ಬೆಳ್ತಂಗಡಿ: ಎಸ್ಪಿಯಿಂದ ಪೊಲೀಸ್ ವಸತಿಗೃಹಗಳ ಪರಿಶೀಲನೆ
Update: 2016-06-07 21:50 IST
ಬೆಳ್ತಂಗಡಿ, ಜೂ.7:ಮೂಲಭೂತ ಸೌಕರ್ಯ ಸೇರಿದಂತೆ ಹಲವಾರು ಬೇಡಿಕೆಯನ್ನು ಮುಂದಿರಿಸಿ ಜೂ.4ರಂದು ಕರ್ತವ್ಯಕ್ಕೆ ಹಾಜರಾಗದೆ ರಜೆ ಮಾಡಲು ಉದ್ದೇಶಿಸಿದ್ದ ಪೊಲೀಸರಿಗೆ ರಾಜ್ಯ ಸರಕಾರ ನೀಡಿದ ಭರವಸೆ ಹಾಗೂ ಮಂಗಳವಾರ ಮಂಗಳೂರಿನಲ್ಲಿ ನಡೆದ ದಲಿತರ ಕುಂದುಕೊರತೆ ಸಭೆಯಲ್ಲಿ ಪ್ರಸ್ತಾವನೆಗೊಂಡ ಹಿನ್ನಲೆಯಲ್ಲಿ ದ.ಕ. ಎಸ್ಪಿ ಗುಲಾಬ್‌ರಾವ್ ಬೊರಸೆ ಮಂಗಳವಾರ ಸಂಜೆ ಬೆಳ್ತಂಗಡಿಗೆ ಭೇಟಿ ನೀಡಿ ಪೊಲೀಸ್ ವಸತಿ ಗೃಹಗಳ ಬಗ್ಗೆ ಪರಿಶೀಲನೆ ನಡೆಸಿದರು.
ಪೊಲೀಸರ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ ಹಾಗೂ ವಸತಿ ಗೃಹ ಸರಿಪಡಿಸುವ ಬಗ್ಗೆ ಪರಿಶೀಲನೆ ನಡೆಸಿದರು. ನಿರ್ಮಿತಿ ಕೇಂದ್ರದ ಅಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು. ಬಂಟ್ವಾಳ ಡಿವೈಎಸ್ಪಿ ಭಾಸ್ಕರ ರೈ, ಬೆಳ್ತಂಗಡಿ ಸರ್ಕಲ್ ಇನ್‌ಸ್ಪೆಕ್ಟರ್ ನೇಮಿರಾಜ್, ಎಸ್ಸೈ ಸಂದೇಶ್, ಸಿಬ್ಬಂದಿ ಉಪಸ್ಥಿತರಿದ್ದರು.