ಬೆಳ್ತಂಗಡಿ: ಜೈನ್ ಮಿಲನ್ ಸಭೆ
ಬೆಳ್ತಂಗಡಿ, ಜೂ.7: ಬೆಳ್ತಂಗಡಿ ಜೈನ್ ಮಿಲನ್ ಸಭೆಯು ಧರ್ಮಸ್ಥಳ ಸಾಧನ ಸಭಾಭವನದಲ್ಲಿ ವೀರ್ ಕಿಶೋರ್ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಜರಗಿತು.
ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಬೆಂಗಳೂರಿನ ಖ್ಯಾತ ವಕೀಲ ವೀರ್ ಜಿನೇಂದ್ರ ಜೈನ್,ಸಲ್ಲೇಖನ ವೃತದ ಬಗ್ಗೆ ಇರುವ ತಪ್ಪುಕಲ್ಪನೆಯ ಬಗ್ಗೆ ಸರಕಾರಕ್ಕೆ ಮಿಲನ್ ಮುಖಾಂತರ ಮನವರಿಕೆ ಮಾಡುವ ಕೆಲಸ ಮಾಡಬೇಕೆಂದು ತಿಳಿಸಿದರು.
ಕೇಂದ್ರ ಸರಕಾರದ ಹೆಚ್ಚುವರಿ ಸರಕಾರಿ ವಕೀಲ ವೀರ್ ಎನ್. ಡಿ. ರತ್ನವರ್ಮ ಬುಣ್ಣುರನ್ನು ಮಿಲನ್ ವತಿಯಿಂದ ಸನ್ಮಾನಿಸಲಾಯಿತು. ನೂತನ ಅಧ್ಯಕ್ಷ ವೀರ್ ಧನಕೀರ್ತಿ ಅರಿಗರ ನೇತೃತ್ವದಲ್ಲಿ ವೀರುಶೆಟ್ಟಿ, ಜಯಕೀರ್ತಿ ಜೈನ್, ಎನ್ ಡಿ. ರತ್ನವರ್ಮ ಬುಣ್ಣು, ದೇವಪಾಲ ಅಜ್ರಿ, ಉಷಾ ಶುಬಾಚಂದ್ರ ಜೈನ್, ರಾಕೇಶ್ ಜೈನ್, ಕಿಶೋರ್ ಆರಿಗ, ಶ್ರೇಯಾಂಕ್ ಜೈನ್ ಹಾಗೂ ರಂಜಿತ್ ಜೈನ್ ನೂತನ ಸದಸ್ಯರಾಗಿ ಮಿಲನ್‌ಗೆ ಸೇರ್ಪಡೆಯಾದರು.
ನಿರ್ದೇಶಕರಾದ ವೀರ್ ಸೋಮಶೇಖರ ಶೆಟ್ಟಿ ಪ್ರಮಾಣವಚನ ಬೋಧಿಸಿದರು. ಸ್ಥಾಪಕಾಧ್ಯಕ್ಷ ಭೋಜರಾಜ ಹೆಗ್ಡೆ ಹಾಗೂ ಜೀವಂಧರ ಕುಮಾರ್ ಜೈನ್ ನೂತನ ಪದಾಧಿಕಾರಿಗಳಿಗೆ ಶುಭಹಾರೈಸಿದರು. ಭುಜಬಲಿ ಸ್ವಾಗತಿಸಿ, ವೀರ್ ಡಾ. ಐ.ಶಶಿಕಾಂತ್ ಜೈನ್ ವಂದಿಸಿದರು. ವೃಷಭ ಅರಿಗ ಕಾರ್ಯಕ್ರಮ ನಿರೂಪಿಸಿದರು.