ಕೊಯ್ಯೂರು: ವಿಶ್ವ ಪರಿಸರ ದಿನಾಚರಣೆ
Update: 2016-06-07 22:17 IST
ಬೆಳ್ತಂಗಡಿ, ಜೂ.7: ಕೊಯ್ಯೂರು ಸರಕಾರಿ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಇಂಗುಗುಂಡಿ ರಚನೆ ಮಾಡುವುದರ ಮೂಲಕ ಆಚರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯ ರಾಧಕೃಷ್ಣ ತಚ್ಚಮೆ, ವಾರ್ಷಿಕ ನಾಲ್ಕು ಸಾವಿರ ಮಿಲಿಮೀಟರ್ ಮಳೆಯಾಗುವ ದ.ಕ ಜಿಲ್ಲೆಯಲ್ಲಿ ಈ ವರ್ಷ ನೀರಿಗಾಗಿ ಪರದಾಡುವಂತಹ ಪರಿಸ್ಥಿತಿ ಬಂದೊದಗಿತ್ತು. ನಮ್ಮ ನೀರಿನ ಮೂಲಗಳಾದ ಕೆರೆ, ಬಾವಿ, ಕೊಳವೆಬಾವಿ, ನದಿ, ಹಳ್ಳ, ಕೊಳ್ಳಗಳಿಗೆ ನೀರು ಪೂರೈಕೆಯಾಗುವುದು ಮಳೆಯಿಂದ ಮಾತ್ರ. ಮಳೆಗಾಲದಲ್ಲಿ ನೀರನ್ನು ಸಂಗ್ರಹಿಸಿಡಬೇಕು. ಸಂಗ್ರಹಿಸಲು ಬೇಕಾದಷ್ಟು ಜಾಗ ಭೂಮಿಯೊಳಗೆ ಇದೆ. ಹೀಗೆ ಭೂಮಿಯಲ್ಲಿ ಸಂಗ್ರಹಿಸಿಡುವ ಒಂದು ವಿಧಾನವೇ ಇಂಗುಗುಂಡಿ. ವಿದ್ಯಾರ್ಥಿಗಳು ಎಲ್ಲರ ಮನೆಯಲ್ಲೂ ಮಳೆನೀರು ಕೊಯ್ಲು, ಅಂತರ್ಜಲ ಮರುಪೂರಣ ಇಂಗುಗುಂಡಿಗಳನ್ನು ತರೆದು ನೀರನ್ನು ಮುಂಬರುವ ಬೇಸಿಗೆಕಾಲದಲ್ಲಿ ಬಳಸಲು ಸಂಗ್ರಹಿಸಿಡಬೇಕೆಂದು ಕರೆ ನೀಡಿದರು.
ಶಾಲಾ ಶಿಕ್ಷಕರಾದ ಸುಧಾಕರ ಶೆಟ್ಟಿ, ರಾಮಚಂದ್ರ ದೊಡಮನಿ, ಮಾಲಿನಿ ಹೆಗಡೆ ಇದ್ದರು.