×
Ad

ಕ್ಸಿನ್‌ಜಿಯಾಂಗ್ ನಿವಾಸಿಗಳು ಪಾಸ್‌ಪೋರ್ಟ್ ಪಡೆಯಲು ಡಿಎನ್‌ಎ ನೀಡಬೇಕು

Update: 2016-06-07 23:38 IST

ಬೀಜಿಂಗ್, ಜೂ. 7: ಚೀನಾದ ಮುಸ್ಲಿಂ ಪ್ರಾಬಲ್ಯದ ವಲಯ ಕ್ಸಿನ್‌ಜಿಯಾಂಗ್‌ನ ಗಡಿ ಜಿಲ್ಲೆಯೊಂದರ ನಿವಾಸಿಗಳು ಇನ್ನು ಪಾಸ್‌ಪೋರ್ಟ್‌ಗಳಿಗಾಗಿ ಅರ್ಜಿ ಸಲ್ಲಿಸುವಾಗ ಡಿಎನ್‌ಎ ಮಾದರಿಗಳನ್ನೂ ನೀಡಬೇಕಾಗಿದೆ ಎಂದು ಅಧಿಕೃತ ಸ್ಥಳೀಯ ಮಾಧ್ಯಮವೊಂದು ತಿಳಿಸಿದೆ.

ಚೀನಾದ ವಾಯವ್ಯದ ತುದಿಯಲ್ಲಿರುವ ಯಿಲಿ ಕಝಕ್ ಸ್ವಾಯತ್ತ ರಾಜ್ಯದ ನಿವಾಸಿಗಳು ಜೂನ್ 1ರಿಂದ ನಿರ್ದಿಷ್ಟ ಪ್ರಯಾಣ ದಾಖಲೆಗಳಿಗೆ ಅರ್ಜಿ ಸಲ್ಲಿಸುವಾಗ ಪೊಲೀಸರಿಗೆ ಡಿಎನ್‌ಎ ಮಾದರಿಗಳು, ಬೆರಳಚ್ಚು, ಧ್ವನಿಮುದ್ರಿಕೆ ಮತ್ತು ‘‘ಮೂರು ಆಯಾಮಗಳ ಚಿತ್ರ’’ವೊಂದನ್ನು ನೀಡಬೇಕಾಗಿದೆ ಎಂದು ಅಧಿಕೃತ ‘ಯಿಲಿ ಡೇಲಿ’ ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News