ಜೂ.13ರಂದು ದಾರುನ್ನೂರ್ ಕಾಶಿಪಟ್ಣದಲ್ಲಿ ಇಫ್ತಾರ್ ಕೂಟ

Update: 2016-06-08 17:54 GMT

ಮೂಡುಬಿದಿರೆ, ಜೂ.8: ಇಲ್ಲಿನ ಕಾಶಿಪಟ್ಣದ ದಾರುನ್ನೂರ್ ಎಜುಕೇಷನ್ ಸೆಂಟರ್‌ನ ಆಶ್ರಯದಲ್ಲಿ ಜೂ.13ರಂದು ಕಾಶಿಪಟ್ನದಲ್ಲಿರುವ ದಾರುನ್ನೂರ್ ಕ್ಯಾಂಪಸ್ನಲ್ಲಿ ಬೃಹತ್ ಇಫ್ತಾರ್ ಕೂಟ ನಡೆಯಲಿದೆ. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ದಾರುನ್ನೂರಿನ ಮಕ್ಕಳೊಂದಿಗೆ ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ದಾರುನ್ನೂರಿನ ಮುಖ್ಯ ಶಿಲ್ಪಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಮತ್ತು ದಾರುನ್ನೂರಿನ ಕೇಂದ್ರ ಸಮಿತಿ ಅಧ್ಯಕ್ಷ ಹಾಜಿ ವೈ. ಮುಹಮ್ಮದ್ ಕುಂಞಿ, ದಾರುನ್ನೂರಿನ ನಿರ್ದೇಶಕ ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮಂಗಳೂರು, ಕೋಶಾಧಿಕಾರಿ ಇಸ್ಮಾಯೀಲ್ ಹಾಜಿ ಕಲ್ಲಡ್ಕ ಮೊದಲಾದ ಪ್ರಮುಖರು ಅತಿಥಿಗಳನ್ನು ಸ್ವಾಗತಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ಬಿ.ಅಬ್ದುರ್ರಝಾಕ್, ಅಲ್ ಫಲಾಹ್ ಗ್ರೂಪ್‌ನ ಅಧ್ಯಕ್ಷ ಯೂಸುಫ್ ಸುಬ್ಬಯ್ಯಕ್ಕಟ್ಟೆ, ನೆಲ್ಲರ ಗ್ರೂಪ್‌ನ ಆಡಳಿತ ನಿರ್ದೇಶಕ ಸಂಶುದ್ದೀನ್ ನೆಲ್ಲರ, ಮಂಜೇಶ್ವರ ಪಂಚಾಯತ್‌ನ ಅಧ್ಯಕ್ಷ ಎ.ಎಂ. ಅಶ್ರಫ್ ಪ್ರೆಸಿಡೆಂಟ್, ಅಲ್ ಹತ್ಬೂರ್ ಗ್ರೂಪ್‌ನ ಆಡಳಿತ ನಿರ್ದೇಶಕ ಇಕ್ಬಾಲ್ ಅಬ್ದುಲ್ ಹಮೀದ್, ಕಾಸರಗೋಡು ಜಿಪಂನ ಅಧ್ಯಕ್ಷ ಹರ್ಶದ್ ವರ್ಕಾಡಿ, ಗೋಲ್ಡ್‌ಕಿಂಗ್ ಗ್ರೂಪ್‌ನ ಅಧ್ಯಕ್ಷ ಹನೀಫ್ ಗೋಲ್ಡ್ಕಿಂಗ್, ಮೂಸಾ ಶರೀಫ್ ಮೊಗ್ರಾಲ್, ಪ್ರವಾಸಿ ಲೀಗ್ ಮಂಜೇಶ್ವರದ ಕಾರ್ಯದರ್ಶಿ ಅಶ್ರಫ್ ಕಾರ್ಲ, ದಾರುನ್ನೂರ್ ಉಪಾಧ್ಯಕ್ಷ ಇಬ್ರಾಹೀಂ ಹಾಜಿ ಕೋಡಿಜಾಲ್, ಹಾಜಿ ಅಬ್ದುಲ್ಲತೀಫ್ ಮದರ್ ಇಂಡಿಯ, ಹಾಸ್ಕೋ ಅಬ್ದುರ್ರಹ್ಮಾನ್ ಹಾಜಿ, ನೌಶಾದ್ ಹಾಜಿ ಸೂರಲ್ಪಾಡಿ, ರಿಯಾಝ್ ಹಾಜಿ ಬಂದರ್,ದಾರುನ್ನೂರ್ ಯುಎಇನ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಆತೂರು ಮತ್ತು ದಾರುನ್ನೂರ್ ಯುಎಇ ಕಾರ್ಯದರ್ಶಿ ಅಶ್ರಫ್ ಪರ್ಲಡ್ಕ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಇದೇ ಸಂದರ್ಭದಲ್ಲಿ ಅಲ್ ಫಲಾಹ್ ಗ್ರೂಪ್‌ನ ವತಿಯಿಂದ ದಾರುನ್ನೂರ್‌ನ ವಿದ್ಯಾರ್ಥಿಗಳಿಗೆ ರಮಝಾನ್ ಕಿಟ್‌ನ್ನು ವಿತರಿಸಲಾಗುವುದು. ದಾರುನ್ನೂರ್ ಯುಎಇನ ಕೋಶಾಧಿಕಾರಿ ಅಬ್ದುಸ್ಸಲಾಂ ಬಪ್ಪಳಿಗೆಯವರ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ದಾರುನ್ನೂರ್ ಯುಎಇ ರಾಷ್ಟ್ರೀಯ ಸಮಿತಿಯ ಸಲೀಂ ಅಲ್ತಾಫ್ ಫರಂಗಿಪೇಟೆ ಹಾಗೂ ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News