×
Ad

ಅಲಂಗಾರು: ಸಿಡಿಲು ಬಡಿದು ಮನೆಗೆ ಹಾನಿ

Update: 2016-06-08 19:29 IST

ಮೂಡುಬಿದಿರೆ, ಜೂ.8: ಅಲಂಗಾರು ಚಂದ್ರಪುರದ ಪೀಟರ್ ಡಿ’ಸೋಜ ಎಂಬವರ ಮನೆಗೆ ಬುಧವಾರ ಬೆಳಗ್ಗೆ ಸಿಡಿಲು ಬಡಿದಿದೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಗೋಡೆಗಳು ಬಿರುಕುಬಿಟ್ಟಿದೆ.

ಬುಧವಾರ ಬೆಳಗ್ಗೆ ಸುಮಾರು 8:30ರ ವೇಳೆಗೆ ಸಿಡಿಲು ಬಡಿದಿದ್ದು, ಮನೆಯ ಮುಂದೆ ಇದ್ದ ಪ್ಲಾಸ್ಟಿಕ್ ಚಪ್ಪರ ಹಾಗೂ ಮರಕ್ಕೂ ಸಿಡಿಲು ಬಡಿದಿದೆ. ಘಟನೆಯ ಸಂದರ್ಭದಲ್ಲಿ ಪೀಟರ್ ಅವರ ಪತ್ನಿ ಹಾಗೂ ಮಗ ಮನೆಯಲ್ಲಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ 20 ಸಾವಿರ ರೂ. ನಷ್ಟವಾಗಿರಬಹುದೆಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News