×
Ad

ವಾಟ್ಸಾಪ್‌ನಲ್ಲಿ ಅಪಪ್ರಚಾರ: ಸಿಪಿಎಂ ಕಾರ್ಯಕರ್ತರ ವಿರುದ್ಧ ದೂರು

Update: 2016-06-08 20:45 IST

ಮಂಜೇಶ್ವರ, ಜೂ.8: ಬಿಜೆಪಿ ಅ್ಯರ್ಥಿ ವಿರುದ್ಧ ವಾಟ್ಸಾಪ್ ಗ್ರೂಪ್‌ನಲ್ಲಿ ಅಪಪ್ರಚಾರ ನಡೆಸಿದ ಆರೋಪದಂತೆ ಸಿಪಿಎಂ ಕಾರ್ಯಕರ್ತನೊಬ್ಬನ ವಿರುದ್ಧ ಬದಿಯಡ್ಕ ಪೊಲೀಸರು ದೂರು ದಾಖಲಿಸಿದ್ದಾರೆ.

ಬದಿಯಡ್ಕ ನಿವಾಸಿ ಸಿಪಿಎಂ ಕಾರ್ಯಕರ್ತ ಇಬ್ರಾಹಿಂ (49) ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಮಂಡಲ ಬಿಜೆಪಿ ಅಭ್ಯರ್ಥಿಯಾಗಿದ್ದ ರವೀಶ ತಂತ್ರಿ ಕುಂಟಾರು ವಿರುದ್ದ ಅಪಪ್ರಚಾರ ನಡೆಸಲಾಗಿತ್ತು. ಕೆಲವೊಂದು ಅಸಭ್ಯ ವಾಕ್ಯಗಳನ್ನು ಬರೆದು ಅದರ ಜತೆ ರವೀಶ್ ತಂತ್ರಿಯವರ ಭಾವಚಿತ್ರವನ್ನು ಪ್ರಕಟಿಸಿ ವಾಟ್ಸಾಪ್‌ನಲ್ಲಿ ಅಪಪ್ರಚಾರ ಮಾಡಲಾಗಿತ್ತು.

ಇದರ ವಿರುದ್ಧ ತಂತ್ರಿಯವರು ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News