ಅಕ್ರಮ ಮದ್ಯ ಸಾಗಾಟ: ಮದ್ಯ ಸಹಿತ ಕಾರು ವಶಕ್ಕೆ
Update: 2016-06-08 20:52 IST
ಮಂಜೇಶ್ವರ, ಜೂ.8: ಕಾರಿನಲ್ಲಿ ಸಾಗಿಸಲಾಗುತಿದ್ದ 532 ಬಾಟ್ಲಿ ಅನಧಿಕೃತ ಮದ್ಯವನ್ನು ಮಂಜೇಶ್ವರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಬುಧವಾರ ಮುಂಜಾನೆ ಕುಂಜತ್ತೂರು ಪರಿಸರದಲ್ಲಿ ಮಂಜೇಶ್ವರ ಪೊಲೀಸರು ವಾಹನ ತಪಾಸಣೆ ನಡೆಸುತ್ತಿರುವ ಮಧ್ಯೆ ಸಂಶಯಕ್ಕೆ ಕಾರಣವಾದ ಕಾರನ್ನು ಪೊಲೀಸರು ನಿಲ್ಲಿಸಲು ಸೂಚನೆ ನೀಡಿದರೂ ಚಾಲಕ ನಿಲ್ಲಿಸದೆ ಮುಂದುವರಿದ ಕಾರಣ ಪೊಲೀಸರು ಕಾರನ್ನು ಬೆನ್ನಟ್ಟಿದ್ದು, ಮಂಜೇಶ್ವರ ಗೋವಿಂದ ಪೈ ಕಾಲೇಜು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರನ್ನು ಬಿಟ್ಟು ಚಾಲಕ ಪರಾರಿಯಾಗಿದ್ದಾನೆನ್ನಲಾಗಿದೆ.
ಪೊಲೀಸರು ಆಗಮಿಸಿ ಕಾರನ್ನು ಪರಿಶೋಧಿಸಿದಾಗ ಕಾರಿನೊಳಗೆ 532 ಬಾಟ್ಲಿ ಮದ್ಯವನ್ನು ಪತ್ತೆ ಹಚ್ಚಲಾಗಿದೆ. ಕೆಎ 19 ಎಂಎಫ್ 3611 ಕಾರನ್ನು ವಶಕ್ಕೆ ಪಡೆಯಲಾಗಿದೆ. ಪರಾರಿಯಾದ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.