ಮಟ್ಕಾ ಅಡ್ಡೆಗೆ ದಾಳಿ: ಮೂವರ ಸೆರೆ
Update: 2016-06-08 20:59 IST
ಮಂಜೇಶ್ವರ, ಜೂ.8: ಮಟ್ಕಾ ಅಡ್ಡೆಯೊಂದಕ್ಕೆ ದಾಳಿ ನಡೆಸಿದ ಕುಂಬಳೆ ಪೊಲೀಸರು ಆಟದಲ್ಲಿ ನಿರತರಾಗಿದ್ದ ಮೂವರನ್ನು ಸೆರೆ ಹಿಡಿದು ಆಟಕ್ಕೆ ಬಳಸಲಾದ ನಗದನ್ನು ವಶಪಡಿಸಿಕೊಂಡ ಘಟನೆ ಕುಂಬಳೆ ಪೇಟೆಯಲ್ಲಿ ನಡೆದಿದೆ.
ಕೊಯಿಪ್ಪಾಡಿ ನಿವಾಸಿಗಳಾದ ಭಾಸ್ಕರ (43), ಮನೋಜ್ (34) ಹಾಗೂ ಅಚ್ಯುತ (46) ಸೆರೆಗೀಡಾದ ವ್ಯಕ್ತಿಗಳು. ಇವರಿಂದ ಆಟಕ್ಕೆ ಬಳಸಲಾದ 2,900 ರೂ.ನ್ನು ವಶಪಡಿಸಿಕೊಳ್ಳಲಾಗಿದೆ.