×
Ad

ಮೂಡುಬಿದಿರೆ: ಬಸ್‌ಸ್ಟ್ಯಾಂಡ್ ಗೆಳೆಯರ ಬಳಗದ ಅಧ್ಯಕ್ಷರಾಗಿ ಅಶೋಕ್ ಆಳ್ವ ಆಯ್ಕೆ

Update: 2016-06-08 23:35 IST

ಮೂಡುಬಿದಿರೆ, ಜೂ.8: ಯಾವುದೇ ಪಕ್ಷ, ಜಾತಿ, ಬೇಧ ಇಲ್ಲದೇ ಸಾಮಾಜಿಕ ಕಳಕಳಿಯ ಉದ್ದೇಶದಿಂದ ನೂತನವಾಗಿ ರಚಿಸಲಾಗಿರುವ ಇಲ್ಲಿನ ಬಸ್‌ಸ್ಟ್ಯಾಂಡ್ ಗೆಳೆಯರ ಬಳಗದ ಅಧ್ಯಕ್ಷರಾಗಿ ಅಶೋಕ್ ಆಳ್ವ ಆಯ್ಕೆಯಾಗಿದ್ದಾರೆ.

ಮೂಡುಬಿದಿರೆ ಸಮಾಜಮಂದಿರದಲ್ಲಿ ಸೋಮವಾರ ನಡೆದ ಬಸ್‌ಸ್ಟ್ಯಾಂಡ್ ಗೆಳೆಯರ ಬಳಗದ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಅಬ್ದುಲ್ಲತೀಫ್ ಮದರ್ ಇಂಡಿಯಾ, ರಾಘು ಗುರುಸ್ವಾಮಿ, ಡೆಲ್ಲಾ ಝೀನತ್, ಗೌರವ ಸಲಹೆಗಾರರಾಗಿ ಡಿ.ಎ. ಉಸ್ಮಾನ್, ಚಂದ್ರಶೇಖರ ಶೆಟ್ಟಿ, ಉಮರಬ್ಬ ನೀರಳ್ಕೆ ಅವರನ್ನು ಈ ಸಂದರ್ಭ ಆಯ್ಕೆ ಮಾಡಲಾಯಿತು.

ಸಂಚಾಲಕರಾಗಿ ಸಂತೋಷ್ ಶೆಟ್ಟಿ, ಉಪಾಧ್ಯಕ್ಷರಾಗಿ ರವಿರಾಜ್ ಭಂಡಾರಿ, ಇಬ್ರಾಹೀಂ ಬೂಟ್‌ಬಝಾರ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ವಿಶಾಲ್‌ನಗರ, ಕಾರ್ಯದರ್ಶಿಗಳಾಗಿ ರಮೇಶ್ ಶೆಟ್ಟಿ ತೋಡಾರ್, ಜಗದೀಶ್ ಮೂಡುಬಿದಿರೆ, ಜತೆಕಾರ್ಯದರ್ಶಿಗಳಾಗಿ ಸುರೇಂದ್ರ ನೀರಳ್ಕೆ, ಸಂತೋಷ್ ಶೆಟ್ಟಿ ಒಂಟಿಕಟ್ಟೆ, ಶಂಕರ್ ಮಾಸ್ತಿಕಟ್ಟೆ, ಖಜಾಂಜಿಯಾಗಿ ಸಂದೀಪ್ ಶೆಟ್ಟಿ ತೋಡಾರ್, ಸಂಘಟನಾ ಕಾರ್ಯದರ್ಶಿಗಳಾಗಿ ಸತೀಶ್ ಶೆಟ್ಟಿ ಹೊಸಂಗಡಿ, ಸುಶಾಂತ್ ಶೆಟ್ಟಿ ವಿಶಾಲನಗರ, ನಾಗೇಶ್ ಪಳಕಳ, ರೋಶನ್ ಡಿಸೋಜಾ ಆಯ್ಕೆಯಾಗಿದ್ದಾರೆ.

ಸುಧಾಕರ ಶೆಟ್ಟಿ ಬೆದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News