×
Ad

ಇಂದಿನ ಕಾರ್ಯಕ್ರಮ

Update: 2016-06-08 23:43 IST

ಶಾಲೆ ಉದ್ಘಾಟನೆ: ಆದಿ ಉಡುಪಿ ಶಿಕ್ಷಣ ಸಮಿತಿಯ ವತಿಯಿಂದ ಆದಿ ಉಡುಪಿ ಆಂಗ್ಲಮಾಧ್ಯಮ ಕಿ.ಪ್ರಾ. ಶಾಲೆಯ ಉದ್ಘಾಟನೆ. ಸಮಯ: ಬೆಳಗ್ಗೆ 10ಕ್ಕೆ. ಸ್ಥಳ: ಆದಿಉಡುಪಿ ಹಿ.ಪ್ರಾ.ಶಾಲಾ ಆವರಣ.

ಚಿತ್ರಕಲಾ ಪ್ರದರ್ಶನ: ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾವಿದ ಎಸ್.ವಿ.ಹೂಗಾರ್‌ರ ಕಲಾಕೃತಿಗಳ ಪ್ರದರ್ಶನ ‘ಒಳಾವರಣ ಅಭಿವ್ಯಕ್ತಿ’ ಉದ್ಘಾಟನೆ. ಸಮಯ: ಸಂಜೆ 5ಕ್ಕೆ. ಸ್ಥಳ: ತ್ರಿವರ್ಣ ಆರ್ಟ್ ಗ್ಯಾಲರಿ, ಅನ್ನಪೂರ್ಣ ಬಿಲ್ಡಿಂಗ್ ಮಣಿಪಾಲ.

ಉಚಿತ ಪುಸ್ತಕ ವಿತರಣೆ: ಸ್ಪಂದನಾ ಸೇವಾ ಸಂಸ್ಥೆ ಬೆಂಗಳೂರು ವತಿಯಿಂದ ಕಲ್ಯಾಣಪುರ ಗ್ರಾಮದ ಹಿಂದೂ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳ ವಿತರಣೆ. ಸಮಯ: ಅಪರಾಹ್ನ 3:30ಕ್ಕೆ. ಸ್ಥಳ: ಹಿಂದೂ ಹಿ.ಪ್ರಾ.ಶಾಲೆಯ ಆವರಣ, ಕಲ್ಯಾಣಪುರ.

ವಿಶ್ವ ಪರಿಸರ ದಿನಾಚರಣೆ

ಉಡುಪಿ, ಜೂ.8: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಡುಪಿ ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವು ಜೂ.9ರಂದು ಬೆಳಗ್ಗೆ 10 ಗಂಟೆಗೆ ವಳಕಾಡಿನ ಉಡುಪಿಯ ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ನಡೆಯಲಿದೆ.

ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಲತಾ ಕಾರ್ಯಕ್ರಮ ಉದ್ಘಾಟಿಸುವರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಉಪ ಸಮನ್ವಯಾಧಿಕಾರಿ ಪಿ.ನಾಗರಾಜ ಅಧ್ಯಕ್ಷತೆ ವಹಿಸುವರು. ಮಣಿಪಾಲ ಎಂಐಟಿಯ ಪ್ರೊ. ಡಾ.ಉದಯಶಂಕರ್ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News