ಕಲ್ಲಬೆಟ್ಟು: ಎಕ್ಸ್‌ಲೆಂಟ್ ಕಾಲೇಜಿನಲ್ಲಿ ಪರಿಸರ ದಿನಾಚರಣೆ
Update: 2016-06-08 23:43 IST
ಮೂಡುಬಿದಿರೆ, ಜೂ.8: ಇಲ್ಲಿಗೆ ಸಮೀಪದ ಕಲ್ಲಬೆಟ್ಟುವಿನ ಎಕ್ಸ್‌ಲೆಂಟ್ ಕಾಲೇಜಿನಲ್ಲಿ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಸಹಕಾರದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಗಿಡಗಳನ್ನು ನೆಟ್ಟು ಅವುಗಳ ಸಂಪೂರ್ಣ ಸಂರಕ್ಷಣೆಯ ಸಂಕಲ್ಪವನ್ನು ಕೈಗೊಳ್ಳಲಾಯಿತು.
ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಆಡಳಿತ ಅಧಿಕಾರಿ ಡಾ. ಶ್ರುತಕೀರ್ತಿರಾಜ ಪರಿಸರದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆಯ ಅಧ್ಯಕ್ಷ ಯುವರಾಜ ಜೈನ್, ಪ್ರಾಂಶುಪಾ ಸುರೇಶ್ ಬಾಬು, ವಾಣಿಜ್ಯ ವಿಬಾಗದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ವಿಮಲ್ ಸ್ವಾಗತಿಸಿ, ವರ್ಷಾ ಕಾಮತ್ ನಿರೂಪಿಸಿ ವಂದಿಸಿದರು.