ಸುಟ್ಟಗಾಯದಿಂದ ಮೃತ್ಯು,
Update: 2016-06-08 23:43 IST
ಕೋಟ, ಜೂ. 8: ಸಾಸ್ತಾನದ ನರ್ಸಿ ಹರಿಜನ (69) ಮೇ. 23ರಂದು ರಾತ್ರಿ 8ಕ್ಕೆೆ ಸೌದೆ ಒಲೆಯಲ್ಲಿ ಅಡುಗೆ ತಯಾರಿಸುವಾಗ ಅಕಸ್ಮಿಕವಾಗಿ ಸೀರೆಗೆ ಹತ್ತಿಕೊಂಡ ಬೆಂಕಿಯಿಂದ ತೀವ್ರವಾಗಿ ಸುಟ್ಟಗಾಯಕ್ಕೊಳಗಾಗಿದ್ದರು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾದ ಇವರು ಚಿಕಿತ್ಸೆ ಫಲಕಾರಿಯಾಗದೇ ಜೂ. 5ರಂದು ಮೃತಪಟ್ಟಿದ್ದಾರೆ. ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.