ಜೂ.11: ಸಮಗ್ರ ಕೃಷಿ ಪದ್ಧತಿ, ಸಹಕಾರಿ ಕೃಷಿಸಾಲ ಮಾಹಿತಿ
Update: 2016-06-08 23:44 IST
ಉಡುಪಿ, ಜೂ.8: ಕೊರಂಗ್ರಪಾಡಿ ಸಹಕಾರಿ ವ್ಯವಸಾಯಿಕ ಬ್ಯಾಂಕ್ ನಿಯಮಿತ ಕುಕ್ಕಿಕಟ್ಟೆ, ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ ಇವರ ಸಹಯೋಗದಲ್ಲಿ ಕೊರಂಗ್ರಪಾಡಿ ಸಹಕಾರಿ ವ್ಯವಸಾಯ ಬ್ಯಾಂಕ್‌ನ ಅಲೆವೂರು ಶಾಖೆಯ ಸಮೃದ್ಧಿ ಸಭಾಭವನದಲ್ಲಿ, ಸಮಗ್ರ ಕೃಷಿ ಪದ್ಧತಿ ಮತ್ತು ಸಹಕಾರಿ ಕೃಷಿ ಸಾಲದ ಬಗ್ಗೆ ಸಮಗ್ರ ಮಾಹಿತಿ ನೀಡುವ ಕಾರ್ಯಕ್ರಮ ಜೂ.11ರಂದು ಅಪರಾಹ್ನ 3ಗಂಟೆಗೆ ನಡೆಯಲಿದೆ. ಕೊರಂಗ್ರಪಾಡಿ ಸ.ವ್ಯ.ಬ್ಯಾಂಕ್‌ನ ಅಧ್ಯಕ್ಷ ಅಲೆವೂರು ಶ್ರೀಧರ ಶೆಟ್ಟಿ ಅಧ್ಯಕ್ಷತೆ ವಹಿಸುವರು. ಉಡುಪಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ವಿಜೇತ ನಾರಾಯಣ ದಾಸ ಉಡುಪ ಮತ್ತು ಶ್ರೀನಿವಾಸ ಆಚಾರ್ಯ ಬೈಲೂರುರನ್ನು ಸನ್ಮಾನಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.