×
Ad

ಯಾಂತ್ರೀಕೃತ ಮೀನುಗಾರಿಕೆ ನಿಷೇಧ; ಅಕ್ರಮ ಮೀನುಗಾರಿಕೆ: ಮಾಹಿತಿಗೆ ಸೂಚನೆ

Update: 2016-06-08 23:49 IST

ಉಡುಪಿ, ಜೂ.8: ಸರಕಾರದ ಆದೇಶದಂತೆ, ಕರ್ನಾಟಕ ಕರಾವಳಿಯಾದ್ಯಂತ ಜೂ.1ರಿಂದ ಜುಲೈ 31ರವರೆಗೆ ಯಾಂತ್ರೀಕೃತ ಮೀನುಗಾರಿಕೆಯನ್ನು ನಿಷೇಧಿ ಸಲಾಗಿದೆ. ಈ ಅವಧಿಯಲ್ಲಿ 10 ಎಚ್‌ಪಿವರೆಗಿನ ಇಂಜಿನ್ ಅಳವಡಿಸಿದ ನಾಡದೋಣಿಗಳ ಮೀನುಗಾರಿಕೆಗೆ ಮಾತ್ರ ಅವಕಾಶವಿರುತ್ತದೆ. ನಿಷೇಧಿತ ಈ ಅವಧಿಯಲ್ಲಿ ಹೊರರಾಜ್ಯಗಳ ಬೋಟ್‌ಗಳು ರಾಜ್ಯದ ಕರಾವಳಿಯನ್ನು ಪ್ರವೇಶಿಸಬಾರದು ಹಾಗೂ ಮೀನುಗಾರಿಕೆ ಮಾಡಬಾರದೆಂದು ತಿಳಿಸಲಾಗಿದೆ. ಹೊರರಾಜ್ಯದ ಬೋಟ್‌ಗಳು ರಾಜ್ಯದ ಕರಾವಳಿ ಪ್ರದೇಶದಲ್ಲಿ ಕಂಡುಬಂದಲ್ಲಿ ಕಾನೂನು ರೀತಿಯ ಕಠಿಣ ಕ್ರಮವನ್ನು ಜರಗಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಹೊರರಾಜ್ಯದ ಬೋಟ್‌ಗಳು ರಾಜ್ಯ ಕರಾವಳಿ ವ್ಯಾಪ್ತಿಯಲ್ಲಿ ಕಂಡು ಬಂದಲ್ಲಿ ಸಾರ್ವಜನಿಕರು/ಮೀನುಗಾರರು ಟೋಲ್‌ಫ್ರೀ ಸಂಖ್ಯೆ 1093 ಅಥವಾ ದೂರವಾಣಿ ಸಂಖ್ಯೆ 0824-2425680, 0820-2537801, 2522487 ಹಾಗೂ 2522781ಕ್ಕೆ ಕರೆ ಮಾಡಿ ಬೋಟ್ ಹೆಸರು, ನೋಂದಣಿ ಸಂಖ್ಯೆಯ ಮಾಹಿತಿ ನೀಡಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News