ರಮಝಾನ್ ಪ್ರಯುಕ್ತ ‘ಡೊನೇಟ್ ಆ್ಯಂಡ್ ಚೇಂಜ್ ಲೈವ್’ ಕಾರ್ಯಕ್ರಮ
ಮಂಗಳೂರು, ಜೂ.8: ತುಂಬೆ ಸಮೂಹ ಸಂಸ್ಥೆಯ ಅಕಾಡಮಿಕ್ ಆಸ್ಪತ್ರೆಗಳ ಜಾಲದ ಮೂಲಕ ರಮಝಾನ್ ಪ್ರಯುಕ್ತ ಮಕ್ಕಳಿಗಾಗಿ ‘ಡೊನೇಟ್ ಆ್ಯಂಡ್ ಚೇಂಜ್ ಲೈವ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಮೂಲಕ ಪವಿತ್ರ ರಮಝಾನ್ ತಿಂಗಳಲ್ಲಿ ಮಕ್ಕಳಿಗಾಗಿ ಸಾರ್ವಜನಿಕರು ಪುಸ್ತಕಗಳನ್ನು ಹಾಗೂ ಗೊಂಬೆಗಳನ್ನು ಕೊಡುಗೆ ನೀಡಲು ಪ್ರೋತ್ಸಾಹಿಸಲಾಗುತ್ತದೆ.
ತುಂಬೆ ಸಮೂಹ ಸಂಸ್ಥೆಯ ದುಬೈ, ಅಜ್ಮಾನ್ ಮತ್ತು ಫುಜೈರಾಹ್ ಆಸ್ಪತ್ರೆಗಳಲ್ಲಿ ವಿಶೇಷ ಕಾರ್ಯಕ್ರಮದ ಅಂಗವಾಗಿ ಇಫ್ತಾರ್ ಬಳಿಕ ಪ್ರತಿದಿನ ಮಕ್ಕಳಿಗಾಗಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.ಇಫ್ತಾರ್ ಸಂದರ್ಭ ಆಸ್ಪತ್ರೆಯ ವತಿಯಿಂದ ರಮ ಝಾನ್ ತಿಂಗಳಲ್ಲಿ ಸಂದರ್ಶಕರಿಗೆ ಇಫ್ತಾರ್ ಸೌಲಭ್ಯದೊಂದಿಗೆ ಮಜ್ಲಿಸ್ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗಿದೆ.
ತುಂಬೆ ಸಮೂಹ ಸಂಸ್ಥೆಯ ಹೆಲ್ತ್‌ಕೇರ್ ವಿಭಾಗದ ವತಿಯಿಂದ ನಿರ್ವಹಿಸಲ್ಪಡುತ್ತಿರುವ ಗಲ್ಫ್ ಮೆಡಿಕಲ್ ವಿಶ್ವ ವಿದ್ಯಾನಿಲಯದೊಂದಿಗೆ ಸಂಯೋಜಿಸಲ್ಪಟ್ಟ ತುಂಬೆ ನೆಟ್‌ವರ್ಕ್ ಆಸ್ಪತ್ರೆ ಭಾರತದ ಹೈದರಾಬಾದ್ ಸೇರಿದಂತೆ ಗಲ್ಫ್ ರಾಷ್ಟ್ರಗಳ ಅಜ್ಮಾನ್, ದುಬೈ, ಶಾರ್ಜಾ, ಪೂಜೈರಾಹ್ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಅಲ್ಲದೆ, ದುಬೈಯಲ್ಲಿ ತುಂಬೆ ಡೆಂಟಲ್ ಹಾಗೂ ತುಂಬೆ ಕ್ಲಿನಿಕ್, ತುಂಬೆ ಲ್ಯಾಬ್‌ಗಳನ್ನು ಹೊಂದಿದೆ. 2020ರೊಳಗೆ ಜಗತ್ತಿನ ವಿವಿಧೆಡೆ ಇನ್ನೂ 15 ಆಸ್ಪತ್ರೆಗಳನ್ನು ಸಂಸ್ಥೆ ತೆರೆಯುವ ಉದ್ದೇಶ ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.