×
Ad

ನಾಳೆ ಐಟಿಐ ಕ್ಯಾಂಪಸ್ ಸಂದರ್ಶನ

Update: 2016-06-08 23:53 IST

ಉಡುಪಿ, ಜೂ.8: ಮಣಿಪಾಲದ ಪ್ರಗತಿ ನಗರದಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ದೇಶದ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಿಕಾ ಸಂಸ್ಥೆ ಹೊಂಡಾ ಮೋಟಾರ್ಸ್ ಇಂಡಿಯಾ ಜೂ.10ರಂದು ಫಿಟ್ಟರ್, ಟರ್ನರ್, ಮೆಷಿನಿಸ್ಟ್, ವೆಲ್ಡರ್ ವೃತ್ತಿಗಳಲ್ಲಿ ಐಟಿಐ(ಎನ್‌ಸಿವಿಟಿ) ಅಭ್ಯರ್ಥಿಗಳಿಗೆ ಶಿಶಿಕ್ಷು ತರಬೇತಿಯ ಆಯ್ಕೆಗಾಗಿ ಕ್ಯಾಂಪಸ್ ಸಂದರ್ಶನ ನಡೆಸಲಿದ್ದಾರೆ. ಐಟಿಐ ಉತ್ತೀರ್ಣರಾದ ಅಥವಾ ಅಂತಿಮ ವರ್ಷದ ಆಸಕ್ತ ಅಭ್ಯರ್ಥಿಗಳು ಜೂ.10ರಂದು ಬೆಳಗ್ಗೆ 9 ಗಂಟೆಗೆ ಸಂಸ್ಥೆಯಲ್ಲಿ ಎಸೆಸೆಲ್ಸಿ ಮತ್ತು ಐಟಿಐ (ಉತ್ತೀರ್ಣರಾದವರು) ಅಂಕಪಟ್ಟಿ, ಬಯೊಡೇಟಾ, 2 ಭಾವಚಿತ್ರಗಳು ಮತ್ತು ಆಧಾರ್ ಕಾರ್ಡ್ ಗಳೊಂದಿಗೆ ಹಾಜರಾಗುವಂತೆ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂ.ಸಂ.9964247101ನ್ನು ಸಂಪರ್ಕಿ ಸುವಂತೆ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News