×
Ad

ಸಾಲಿಗ್ರಾಮ ಪಟ್ಟಣ ಪಂಚಾಯತ್‌ನಲ್ಲಿ ಆನ್‌ಲೈನ್ ಮೂಲಕ ದೂರು ದಾಖಲು

Update: 2016-06-08 23:55 IST

ಉಡುಪಿ, ಜೂ.8: ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಜನಹಿತ (ಸಾರ್ವ ಜನಿಕ ಕುಂದು-ಕೊರತೆಗಳ ದಾಖಲಾತಿ) ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ ಗಣಕೀಕರಣ ಗೊಳಿಸಲಾಗಿದೆ. ಇದರಿಂದ ಸಾರ್ವಜನಿಕರು ಇಂಟರ್‌ನೆಟ್ ಸೌಲಭ್ಯ ಹೊಂದಿದ್ದಲ್ಲಿ ಮನೆಯಲ್ಲಿಯೇ ಕುಳಿತು ನೇರವಾಗಿ ಆನ್‌ಲೈನ್ ತಂತ್ರಾಂಶದ ಮೂಲಕ ದೂರನ್ನು ದಾಖಲಿಸಬಹುದಾಗಿದೆ.

ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ ದೂರನ್ನು ದಾಖಲಿಸಬಹುದಾದ ವೆಬ್‌ಸೈಟ್ ಲಿಂಕ್‌ಗಳು ಈ ಮುಂದಿನಂತಿವೆ. ಅರ್ಜಿದಾರರು ಮೊಬೈಲ್ ನಂಬರ್ (ಕಡ್ಡಾಯ) ಮತ್ತು ಇ-ಮೇಲ್ ವಿಳಾಸವನ್ನು ನಮೂದಿಸಿದಲ್ಲಿ ಅರ್ಜಿಯ ಸ್ಥಿತಿಗತಿಗಳನ್ನು ತಿಳಿದುಕೊಳ್ಳಬಹುದಾಗಿದೆ. ಅರ್ಜಿದಾರರು- http://www.mrc.gov.in/janahita-ವೆಬ್‌ಸೈಟ್‌ನಲ್ಲಿ ದೂರುಗಳನ್ನು ದಾಖಲಿಸಬಹುದಾಗಿದೆ. ದೂ.ಸಂಖ್ಯೆ 080-23108108ಗೆ ಕರೆಮಾಡಿ ಬೆಳಗ್ಗೆ 6ರಿಂದ ಸಂಜೆ 9ರವರೆಗೆ ದೂರುಗಳನ್ನು ದಾಖಲಿಸುವುದರೊಂದಿಗೆ ಅವುಗಳ ವಿಲೇವಾರಿ ಸ್ಥಿತಿಗತಿ ಮಾಹಿತಿಯನ್ನು ಪಡೆಯಬಹುದಾಗಿದೆ. ಅಲ್ಲದೇ ಮೊಬೈಲ್ ಸಂಖ್ಯೆ 8277777728ನ ವಾಟ್ಸ್‌ಆ್ಯಪ್‌ಗೆ ಸಂದೇಶ ಕಳುಹಿಸಿ ದೂರನ್ನು ದಾಖಲಿಸಬಹುದು. ಪೌರ ಸುಧಾರಣಾ ಕೋಶದ ಟ್ವಿಟರ್@dmakarnataka ಮೂಲಕ ಸಹ ದೂರನ್ನು ದಾಖಲಿಸಬಹುದಾಗಿದೆ. ಅಲ್ಲದೇ 

janahitha@mrc.gov.in/itstaff_ulb_saligrama@yahoo.comಗೆ ಇ-ಮೇಲ್ ಮಾಡಿ ದೂರನ್ನು ದಾಖಲಿಸಬಹುದಾಗಿದೆ. ೇಸ್‌ಬುಕ್ ಅಕೌಂಟ್ ಹೊಂದಿದ್ದಲ್ಲಿ ""Janahitha''(Government Organisation)ಗೆ ದೂರನ್ನು ದಾಖಲಿಸಬಹುದು ಎಂದು ಸಾಲಿಗ್ರಾಮ ಪಟ್ಟಣ ಪಂಚಾಯತ್‌ನ ಮುಖ್ಯಾಕಾರಿಗಳ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News