×
Ad

ಪದೋನ್ನತಿ ಹೊಂದಿದ ಪೊಲೀಸ್ ಸಿಬ್ಬಂದಿಗೆ ಬೀಳ್ಕೊಡುಗೆ

Update: 2016-06-09 16:45 IST

ಮುಂಡಗೋಡ, ಜೂ. 9: ಇಲ್ಲಿನ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿದ ಹಾಗೂ ವರ್ಗಾವಣೆಯಾದ ಪೊಲೀಸ್ ಸಿಬ್ಬಂದಿಗೆ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.

ಎಎಸ್ಸೈ ಆಗಿ ಪದೋನ್ನತಿ ಹೊಂದಿ ವರ್ಗಾವಣೆಯಾದ ಮಾದೇವ ನಾಯ್ಕ ಹಾಗೂ ಲೋಕನಾಥ ನಾಯ್ಕ, ಹೆಡ್ ಕಾನ್‌ಸ್ಟೇಬಲ್ ಆಗಿ ಪದೋನ್ನತಿ ಹೊಂದಿ ವರ್ಗಾವಣೆಯಾದ ಹನುಮಂತ ಭೋವಿ ಹಾಗೂ ವರ್ಗಾವಣೆಯಾದ ರಮೇಶ ರಾಠೋಡ ಹಾಗೂ ಬಾಲರಾಜ ನಾಯ್ಕರಿಗೆ ಪಿ.ಐ. ಎಸ್.ಸಿ.ಪಾಟೀಲ ಹಾಗೂ ಪಿಎಸ್ಸೈ ಲಕ್ಕಪ್ಪ ನಾಯ್ಕ ಶಾಲು ಹೊದೆಸಿ, ಸನ್ಮಾನಿಸಿದರು.

ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಾನ್‌ಸ್ಟೇಬಲ್ ಮಂಜುನಾಥ ಬಿ. ಹಾಗೂ ಜಾಫರ್ ಅದರಗುಂಚಿ ದಂಪತಿಗೆ ಉಡುಗೊರೆ ನೀಡಿ ಅಭಿನಂದಿಸಲಾಯಿತು. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಜರುಗಿದ ಸಮಾರಂಭದಲ್ಲಿ ಪಿ.ಐ. ಎಸ್.ಸಿ. ಪಾಟೀಲ, ಪಿಎಸ್ಸೈ ಲಕ್ಕಪ್ಪ ನಾಯಕ ಸೇರಿದಂತೆ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News