×
Ad

ಯೆನೆಪೊಯ ವಿ.ವಿ. ವತಿಯಿಂದ ಕ್ರಿಕ್‌ಯೆನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ

Update: 2016-06-09 18:05 IST

ಮಂಗಳೂರು, ಜೂ.9: ಯೆನೆಪೊಯ ವಿದ್ಯಾಲಯದ ವೈದ್ಯ ಶಿಕ್ಷಣ ವಿಭಾಗವು ಇತ್ತೀಚೆಗೆ ಆಯೋಜಿಸಿದ್ದ ಪ್ರಥಮ ಕ್ರಿಕ್‌ಯೆನ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆರ್‌ಜಿಯುಎಚ್‌ಎಸ್‌ನ ಸಿಂಡಿಕೇಟ್ ಸದಸ್ಯ ಫ್ರೊ.ಯು.ಟಿ.ಇಫ್ತಿಕಾರ್ ಅಲಿ ಉದ್ಘಾಟಿಸಿದರು.

ದ. ಕ ಮತ್ತು ಉಡುಪಿ ಜಿಲ್ಲೆಗೆ ಒಳಪಡುವ ಕಾಲೇಜು ಹಾಗೂ ವಿಶ್ವವಿದ್ಯಾನಿಲಯದ ಬೋಧಕ ಮತ್ತು ಬೋಧಕೇತರ ವಿಭಾಗದವರಿಗೆ ಪಂದ್ಯಾವಳಿಯನ್ನು ಅಯೋಜಿಸಲಾಗಿತ್ತು. ಈ ಪಂದ್ಯಾವಳಿಯಲ್ಲಿ 10 ತಂಡಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಯೆನೆಪೊಯ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ವಿಜಯಕುಮಾರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಪಂದ್ಯಾವಳಿಯಲ್ಲಿ ಯೆನೆಪೊಯ ವಿಶ್ವವಿದ್ಯಾನಿಲಯವು ಮಂಗಳೂರು ವಿಶ್ವವಿದ್ಯಾನಿಲಯದ ವಿರುದ್ಧ 8 ವಿಕೆಟ್‌ಗಳ ಜಯವನ್ನು ಸಾಧಿಸಿದ್ದು, ವಿಜೇತ ತಂಡಕ್ಕೆ ಯೆನೆಪೊಯ ವಿಶ್ವವಿದ್ಯಾನಿಲಯದ ಸಂಶೋಧನಾ ವಿಭಾಗದ ಉಪ ನಿರ್ದೇಶಕ ಡಾ.ಅರುಣ್ ಭಾಗವತ್ ಪಾರಿತೋಷಕವನ್ನು ನೀಡಿ ಸನ್ಮಾನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News