×
Ad

ಸಿಐಟಿಯು ದ.ಕ. ಜಿಲ್ಲಾಧ್ಯಕ್ಷರಾಗಿ ಜೆ. ಬಾಲಕೃಷ್ಣ ಶೆಟ್ಟಿ ಪುನರಾಯ್ಕೆ,

Update: 2016-06-09 18:12 IST

ಮಂಗಳೂರು, ಜೂ. 9: ಇತ್ತೀಚೆಗೆ ನಡೆದ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ನ 15ನೆ ದ.ಕ. ಜಿಲ್ಲಾ ಸಮ್ಮೇಳನದಲ್ಲಿ ಮುಂದಿನ 3 ವರ್ಷಗಳ ಅವಧಿಗೆ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾಧ್ಯಕ್ಷರಾಗಿ ಜೆ. ಬಾಲಕೃಷ್ಣ ಶೆಟ್ಟಿ ಪುನರಾಯ್ಕೆಗೊಂಡರೆ, ನೂತನ ಪ್ರಧಾನ ಕಾರ್ಯದರ್ಶಿಯಾಗಿ ಸುನೀಲ್ ಕುಮಾರ್ ಬಜಾಲ್ ಹಾಗೂ ಖಜಾಂಚಿಯಾಗಿ ಯೋಗೀಶ್ ಜಪ್ಪಿನಮೊಗರು ಸರ್ವಾನುಮತದಿಂದ ಆಯ್ಕೆಗೊಂಡರು.

ಉಪಾಧ್ಯಕ್ಷರಾಗಿ ಕೆ.ಆರ್. ಶ್ರೀಯಾನ್, ಯು.ಬಿ. ಲೋಕಯ್ಯ, ವಸಂತ ಆಚಾರಿ, ಬಿ.ಎಂ. ಭಟ್, ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿಗಳಾಗಿ ಯು. ಜಯಂತ ನಾಕ್, ಸದಾಶಿವದಾಸ್, ಜಯಂತಿ ಬಿ. ಶೆಟ್ಟಿ, ಸಹಕಾರ್ಯದರ್ಶಿಗಳಾಗಿ ರಾಮಣ್ಣ ವಿಟ್ಲ, ವಸಂತ ನಡ, ರಾಧಾ ಮೂಡುಬಿದಿರೆಯವರನ್ನು ಆರಿಸಲಾಯಿತು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿಲ್ಲೆಯ ವಿವಿಧ ತಾಲೂಕುಗಳಿಂದ, ಯೂನಿಯನ್‌ಗಳಿಂದ ಸುಮಾರು 40 ಮಂದಿಯನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News