ಫುಟ್ಬಾಲ್ ದಂತಕತೆ ಝೈನುದ್ದೀನ್ ಝೈದಾನ್ ಮುಂಬೈನಲ್ಲಿ
ಮುಂಬೈ, ಜೂ.9: ಫ್ರೆಂಚ್ ಫುಟ್ಬಾಲ್ ದಂತಕತೆ ಝೈನುದ್ದೀನ್ ಝೈದಾನ್ ತಮ್ಮ ಪತ್ನಿ ವೆರೊನಿಕ್ ಅವರೊಂದಿಗೆ ಗುರುವಾರ ವಾಣಿಜ್ಯ ನಗರಿ ಮುಂಬೈಗೆ ಆಗಮಿಸಿದ್ದಾರೆ.
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಝೈದಾನ್‌ಗೆ ಫುಟ್ಬಾಲ್ ಅಭಿಮಾನಿಗಳು ಭವ್ಯ ಸ್ವಾಗತ ನೀಡಿದರು. ಪೊಲೀಸರು ಬಿಗಿ ಭದ್ರತೆಯೊಂದಿಗೆ ಅವರನ್ನು ವಿಮಾನ ನಿಲ್ದಾಣದಿಂದ ಹೊರ ಕೊಂಡೊಯ್ದರು.
ರಿಯಲ್ ಮ್ಯಾಡ್ರಿಡ್ ಕೋಚ್ ಝೈದಾನ್ ನಗರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿ ತಲೆ ಎತ್ತಲಿರುವ ರಿಯಲ್ ಎಸ್ಟೇಟ್ ಗ್ರೂಪ್‌ನ ಕನಾಕಿಯಾ ಪ್ಯಾರಿಸ್ ಯೋಜನೆಯೊಂದಿಗೆ ಒಪ್ಪಂದ ಮಾಡಿಕೊಳ್ಳುವ ನಿರೀಕ್ಷೆಯಿದೆ.
ಝೈದಾನ್ ಮೇನಲ್ಲಿ ಕನಾಕಿಯಾ ಗ್ರೂಪ್‌ನ ರಾಯಭಾರಿ ಆಗಿ ನೇಮಕಗೊಂಡಿದ್ದರು.
‘‘ಕನಾಕಿಯಾ ಗ್ರೂಪ್ ಪ್ರೈ ಲಿ.ನೊಂದಿಗೆ ಸಹಿ ಹಾಕಿರುವುದಕ್ಕೆ ಸಂತೋಷವಾಗುತ್ತಿದೆ. ನಮ್ಮನ್ನು ಜೊತೆಗೂಡಿಸಿರುವ ಪಿಎಂಜಿಗೆ ಕೃತಜ್ಞತೆ ಸಲ್ಲಿಸುವೆ’’ ಎಂದು ಝೈದಾನ್ ಹೇಳಿದ್ದಾರೆ.
ಮಾಜಿ ಫ್ರೆಂಚ್ ಫುಟ್ಬಾಲ್ ಆಟಗಾರ ಝೈದಾನ್ 1998ರಲ್ಲಿ ಫ್ರಾನ್ಸ್ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಈ ವರ್ಷದ ಮೇ 28 ರಂದು ಸ್ಪೇನ್‌ನ ದೈತ್ಯ ಕ್ಲಬ್ ರಿಯಲ್ ಮ್ಯಾಡ್ರಿಡ್ ತಂಡ ಚಾಂಪಿಯನ್ಸ್ ಲೀಗ್ ಟ್ರೋಫಿ ಜಯಿಸುವಲ್ಲಿ ಕೋಚ್ ಆಗಿ ಮಾರ್ಗದರ್ಶನ ನೀಡಿದ್ದರು.
Welcome to Mumbai #ZinedineZidane @htTweets @HTSportsNews pic.twitter.com/mHTTOwWldm
— Amit Kamath (@jestalt) June 9, 2016