×
Ad

ಪಡುಮಾರ್ನಾಡು: ಸಾವಯವ ಕೃಷಿಕ ಜಗತ್ಪಾಲ ಹೆಗ್ಡೆಗೆ ಸನ್ಮಾನ

Update: 2016-06-09 19:08 IST

ಮೂಡುಬಿದಿರೆ, ಜೂ.9: ನವಭಾರತ್ ಫರ್ಟಿಲೈಜರ್ ಲಿಮಿಟೆಡ್‌ನ ವತಿಯಿಂದ ಪಡುಮಾರ್ನಾಡು ಪಾರ್ಶ್ವನಾಥ ಹೆಗ್ದೆ ಅವರ ಮನೆಯ ಆವರಣದಲ್ಲಿ ಬುಧವಾರ ನಡೆದ ಸಾವಯವ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಉತ್ತಮ ಕೃಷಿಕ ಪಡುಮಾರ್ನಾಡಿನ ಜಗತ್ಪಾಲ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಹೆಗ್ಡೆ, ಕಳೆದ ನಾಲ್ಕು ವರ್ಷಗಳಿಂದ ಸಾವಯವ ಕೃಷಿಯನ್ನು ಮಾಡುತ್ತಿದ್ದೇನೆ. ಕಂಪನಿಯ ಗೊಬ್ಬರವನ್ನು ಬಳಸುತ್ತಿರುವುದರಿಂದ ಅಡಿಕೆಯಲ್ಲಿ ರೋಗ ನಿಯಂತ್ರಣವಾಗಿದ್ದು ಉತ್ತಮ ಫಸಲನ್ನು ಪಡೆದಿದ್ದೇನೆ ಎಂದು ಅನಿಸಿಕೆಯನ್ನು ಹಂಚಿಕೊಂಡರು.

ಕಂಪನಿಯ ಮಂಗಳೂರು ವಿಭಾಗದ ಡಿಎಸ್‌ಎಂ ಸುಕುಮಾರ್ ಅಮೀನ್ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿ ಕೃಷಿಯಲ್ಲಿ ಸಾವಯವ ಪದ್ಧತಿಯನ್ನು ಬಳಸುವುದರಿಂದ ಭೂಮಿ ಫಲವತ್ತತೆಯನ್ನು ಹೊಂದುತ್ತದೆ ಹಾಗೂ ಕೃಷಿಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಸಾಧ್ಯವಿದೆ. ಭೂಮಿಯು ಹಸಿರುಮಯವಾಗುವ ಮೂಲಕ ಯಾವುದೇ ಅಡ್ಡ ಪರಿಣಾಮಗಳನ್ನು ಬೀರುವುದಿಲ್ಲ ಎಂದರು.

ಕಂಪೆನಿಯ ಸಿಬ್ಬಂದಿ ಜಗದೀಶ ಹಾಗೂ ದಿನೇಶ್ ಉಪಸ್ಥಿತರಿದ್ದರು. ಪೂವಪ್ಪ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News