ಸಿಬಿಎಸ್‌ಇ: ಕುನಿಲ್ ಇಲ್ಮ್ ಅಕಾಡೆಮಿಗೆ ಶೇ.100 ಫಲಿತಾಂಶ
Update: 2016-06-09 19:57 IST
ಮಂಗಳೂರು, ಜೂ 9: ಕುನಿಲ್ ಇಲ್ಮ್ ಅಕಾಡೆಮಿ ನಾಟೆಕಲ್ ಸಂಸ್ಥೆಯು ಸಿಬಿಎಸ್‌ಯ 10ನೆ ತರಗತಿ ಪರೀಕ್ಷೆಯಲ್ಲಿ ಶೇ. 100 ಶೇಕಡ ಫಲಿತಾಂಶ ಪಡೆದಿದೆ.
ಸಂಸ್ಥೆಯ ಮೂವರು ವಿದ್ಯಾರ್ಥಿಗಳಾದ ನೈಮಾ, ಮುಹಮ್ಮದ್ ಯುನುಸ್ ಫಝೀಲ್, ಆಯಿಷತ್ ಶಿರೀನ್ 10 ಸಿಜಿಪಿಎ ಅಂಕಗಳನ್ನು ಪಡೆದಿದ್ದಾರೆ.
ಅನುಷ್ ಕೆ., ಆಯಿಶಾ ಫಿದಾ, ನಿಶಾತ್ ಫಾತಿಮ 9.8 ಸಿಜಿಪಿಎ ಅಂಕಗಳನ್ನು ಪಡೆದಿದ್ದಾರೆ.
7 ವಿದ್ಯಾರ್ಥಿಗಳು 9 ರಿಂದ 9.6 ಸಿಜಿಪಿಎ ಅಂಕ , 16 ವಿದ್ಯಾರ್ಥಿಗಳು 8 ರಿಂದ 8.8 ಸಿಜಿಪಿಎ ಅಂಕ, 10 ವಿದ್ಯಾರ್ಥಿಗಳು 7.2 ರಿಂದ 7.8 ಸಿಜಿಪಿಎ ಅಂಕಗಳನ್ನು ಪಡೆದಿದ್ದಾರೆ.