ಮರವೂರಿನಲ್ಲಿ ಅಕ್ರಮ ಮರಳುಗಾರಿಕೆ: ದೂರು
Update: 2016-06-09 20:29 IST
ಮಂಗಳೂರು,ಜೂ.9: ಮಳವೂರು ಗ್ರಾಮದ ಮರವೂರು ಸೇತುವೆ ಬಳಿ ಅನಧಿಕೃತವಾಗಿ ಮರಳು ತೆಗೆಯುತ್ತಿರುವುದನ್ನು ಪತ್ತೆ ಹಚ್ಚಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪನಿರ್ದೇಶಕ ಕೆ.ಎಸ್. ನಾಗೇಂದ್ರಪ್ಪ ಬಜ್ಪೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬುಧವಾರ ಮರವೂರು ಸೇತುವೆಯ ಬಳಿ ಅನಧಿಕೃತವಾಗಿ ಮರಳು ತೆಗೆಯಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಅವರು ಪರೀಶೀಲನೆಗೆ ತೆರಳಿದ್ದರು. ಈ ಸಂದರ್ಭ ಮರಳು ತೆಗೆಯುವವರು ಸ್ಥಳದಿಂದ ಪರಾರಿಯಾಗಿದ್ದರು. ಸ್ಥಳದಲ್ಲಿ ಮರಳು ತೆಗೆಯಲು ಬಳಸುತ್ತಿದ್ದ 10 ಬುಟ್ಟಿಗಳು, 2 ಗುದ್ದಲಿಗಳು ಸಿಕ್ಕಿದ್ದವು.
ಸಿಆರ್‌ಝಡ್ ಪ್ರದೇಶವಾಗಿರುವ ಈ ಪ್ರದೇಶದಲ್ಲಿ ಇಲ್ಲಿ ಅನುಮತಿ ಇಲ್ಲದೆ ಮರಳನ್ನು ಯತೀಶ್ ಪೂಜಾರಿ ಮತ್ತು ಸತೀಶ್ ಮರವೂರು ಎಂಬವರು ತೆಗೆಯುತ್ತಿದ್ದರು ಎಂದು ಅವರು ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.