×
Ad

ವೇಶ್ಯಾವಾಟಿಕೆ ಅಡ್ಡೆಗೆ ದಾಳಿ: ಇಬ್ಬರ ಸೆರೆ

Update: 2016-06-09 21:29 IST

ಮಂಗಳೂರು, ಜೂ. 9: ನಗರದ ಮೈದಾನ ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ಬಂದರು ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.

ಹೋಟೆಲ್‌ನಲ್ಲಿ ಯುವತಿಯೊಂದಿಗಿದ್ದ ಕುಂದಾಪುರ ತ್ರಾಸಿಯ ನಾಗಪ್ಪಯ್ಯ (40) ಮತ್ತು ವೇಶ್ಯಾವಾಟಿಕೆಗೆ ಸಹಕರಿಸಿದ ಲಕ್ಷ್ಮೀಕಾಂತ್ ಎಂಬಿಬ್ಬರನ್ನು ಬಂಧಿಸಲಾಗಿದೆ.

ಬಂದರು ಠಾಣೆ ಇನ್‌ಸ್ಪೆಕ್ಟರ್ ಶಾಂತರಾಮ್, ಎಎಸ್ಸೈ ಶೋಭಾ, ಹೆಡ್‌ಕಾನ್‌ಸ್ಟೇಬಲ್ ಪುಷ್ಪರಾಜ್, ಸಿಬ್ಬಂದಿಯಾದ ರೇಷ್ಮಾ ಮತ್ತು ಮೋಹನ್ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News