×
Ad

ಬಂಗಾಳ: ಮಾವಿನ ಹಣ್ಣು ಕಳವು ಆರೋಪ ವಿದ್ಯಾರ್ಥಿಯ ಥಳಿಸಿ ಕೊಲೆ

Update: 2016-06-09 22:49 IST

ಕೋಲ್ಕತಾ, ಜೂ.9: ತೋಟವೊಂದರಿಂದ ಮಾವಿನ ಹಣ್ಣುಗಳನ್ನು ಕದ್ದನೆಂಬ ಶಂಕೆಯಿಂದ ಅನಿರುದ್ಧ ಬಿಸ್ವಾಸ್ ಎಂಬ ಕಾಲೇಜು ವಿದ್ಯಾರ್ಥಿಯನ್ನು ಗುಂಪೊಂದು ಥಳಿಸಿಕೊಂದ ದಾರುಣ ಘಟನೆ ಕೋಲ್ಕತಾ ಸಮೀಪದ ಹರಿದೇವಪುರದಲ್ಲಿ ನಡೆದಿದೆ.
ಬಿಸ್ವಾಸ್‌ನನ್ನು ಬಿದಿರಿನ ಕೋಲು ಕಬ್ಬಿಣದ ಸರಳುಗಳಿಂದ ಥಳಿಸಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಕುಟುಂಬ ಸದಸ್ಯರು ಹತ್ತಿರದ ಸರಕಾರಿ ಆಸ್ಪತ್ರೆಯೊಂದರಲ್ಲಿ ದಾಖಲಿಸಿದ್ದರು. ಬಿಸ್ವಾಸ್ ಬುಧವಾರ ಕೊನೆಯುಸಿರೆಳೆದನು.
ಹುಡುಗನು ಚಿಂತಾಜನಕ ಸ್ಥಿತಿಯಲ್ಲಿದ್ದನು. ಆತ ಮುಖ್ಯವಾಗಿ ಆಂತರಿಕ ರಕ್ತ ಸ್ರಾವದಿಂದ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.ಪ್ರಕರಣದ ಸಂಬಂಧ ತಂದೆ-ಮಗನ ಬಂಧಿಸಲಾಗಿದೆ. ಘಟನೆಯ ಜೂ.2ರಂದು ನಡೆದಿದ್ದು, ಮಾವಿನ ಹಣ್ಣುಗಳನ್ನು ಕದಿಯುವುದಕ್ಕಾಗಿ ಜನವಾಸದ ಕಟ್ಟಡವೊಂದಕ್ಕೆ ಸತತವಾಗಿ ಕಲ್ಲೆಸೆಯುತ್ತಿದ್ದವನು ಬಿಸ್ವಾಸ್‌ನೇ ಎಂಬ ಶಂಕೆಯಿಂದ ಪ್ರದೇಶದಲ್ಲಿ ಹಾದು ಹೋಗುತ್ತಿದ್ದ ಆತನನ್ನು ಪೂರ್ವಪಾರದ ಸ್ಥಳೀಯರು ಥಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News