×
Ad

ಮಂಜೇಶ್ವರ: ಜೂ.11ರಿಂದ ಎಸ್ಕೆಎಸ್ಸೆಸ್ಸೆಫ್ ವತಿಯಿಂದ ರಮಝಾನ್ ಪ್ರವಚನ

Update: 2016-06-09 23:53 IST

ಮಂಜೇಶ್ವರ, ಜೂ.9: ಎಸ್ಕೆಎಸ್ಸೆಸ್ಸೆಫ್ ಮಂಜೇಶ್ವರ ವಲಯ ಸಮಿತಿ ನೇತೃತ್ವದಲ್ಲಿ ಜೂ.11 ರಿಂದ 16 ರವರೆಗೆ ರಮಝಾನ್ ಪ್ರವಚನವು ಹೊಸಂಗಡಿ ಶಂಸುಲ್ ಉಲಮಾ ನಗರದಲ್ಲಿ ನಡೆಯಲಿದೆ.

ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್ಕೆಎಸ್ಸೆಸ್ಸೆಫ್ ಮಂಜೇಶ್ವರ ವಲಯ ಸಮಿತಿಯ ಪದಾಧಿಕಾರಿಗಳು, ಜೂ.11ರಂದು ಬೆಳಗ್ಗೆ 9:30ಕ್ಕೆ ಮಜ್ಲಿಸುನ್ನೂರು ನಡೆಯಲಿದೆ. ಬಳಿಕ ಅಬ್ದುಲ್ ಕರೀಂ ಪೈಝಿ ಬಾಷಣ ಮಾಡುವರು. ಜೂನ್ 12ರಂದು ಮನ್ಸೂರ್ ಅಲೀ ದಾರಿಮಿ ಮಲಪ್ಪುರಂ, ಜೂನ್ 13 ಸೋಮವಾರರಂದು ಅಬೂಬಕರ್ ಸಿದ್ದೀಕ್ ಅಝ್‌ಹರಿ ಪಯ್ಯನ್ನೂರು, ಜೂ.14ರಂದು ಕೀಚ್ಚೇರಿ ಅಬ್ದುಲ್ ಗಫೂರ್ ವೌಲವಿ, ಜೂ.15ರಂದು ಜಲೀಲ್ ರಹ್ಮಾನಿ ವಾಣಿಯನ್ನೂರು, ಜೂ.16ರಂದು ಖಲೀಲ್ ಹುದವಿ ಅಲ್ ಮಾಲಿಕಿ ಭಾಷಣ ಮಾಡುವರು.

ಮಂಜೇಶ್ವರ ಶಾಸಕ ಪಿ.ಬಿ ಅಬ್ದುರ್ರಝಾಕ್, ಕಾಸರಗೋಡು ಶಾಸಕ ಎನ್.ಎ ನೆಲ್ಲಿಕ್ಕುನ್ನು, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಉದ್ಯಮಿಗಳಾದ ಲತೀಫ್ ಉಪ್ಪಳಗೇಟ್, ಡಾ.ಮುಹಮ್ಮದ್ ಪಾವೂರು ಸೇರಿದಂತೆ ವಿವಿಧ ಗಣ್ಯರು ಅತಿಥಿಗಳಾಗಿ ಭಾಗವಹಿಸುವರು ಎಂದರು.

ಸುದ್ದಿಗೋಷ್ಟಿಯಲ್ಲಿ ಮುಹಮ್ಮದ್ ಪೈಝಿ ಕಜೆ, ಅಬ್ದುಲ್ಲ ಹಾಜಿ ಪೋಸೋಟ್, ಇಸ್ಮಾಯೀಲ್ ಅಝ್‌ಹರಿ ವಾಮಂಜೂರು , ಅಬ್ದುರ್ರಹ್ಮಾನ್ ಹಾಜಿ ಕಡಂಬಾರ್, ಇಬ್ರಾಹಿಂ ಹಾಜಿ ಸಪಾ , ಕೆ.ಟಿ. ಅಬೂಬಕರ್ ಹಾಜಿ ಸತ್ಯಡ್ಕ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News