ನಿವೃತ್ತರ ವೇತನದಲ್ಲಿ ಹೆಚ್ಚಳ
Update: 2016-06-09 23:55 IST
ಉಡುಪಿ, ಜೂ.9:ನಗರಾಭಿವೃದ್ಧಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ರಾಜ್ಯದ ನಗರ, ಸ್ಥಳೀಯ ಸಂಸ್ಥೆಗಳ ನಿವೃತ್ತಿ ವೇತನ, ಕುಟುಂಬ ನಿವೃತ್ತಿ ವೇತನದಾರರ ವೇತನ ಹೆಚ್ಚಿಸಿ ಸರಕಾರ ಮೇ 20ರಂದು ಆದೇಶ ಹೊರಡಿಸಿದೆ. 2016ರ ಜ.1ರಿಂದ ಅನ್ವಯವಾಗುವಂತೆ ಮೂಲ ನಿವೃತ್ತಿ ವೇತನದ ಶೇ.32.50ರಿಂದ 36ಕ್ಕೆ ತುಟ್ಟಿಭತ್ತೆ ಹೆಚ್ಚಿಸಲಾಗಿದೆ. ಇದರಿಂದಾಗಿ ನಿವೃತ್ತರ ವೇತನದಲ್ಲಿ ಹೆಚ್ಚಳವಾಗಿದೆ ಎಂದು ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್.ಎಸ್.ತೋನ್ಸೆ ಪ್ರಕಟನೆ ಯಲ್ಲಿ ತಿಳಿಸಿದ್ದಾರೆ.