ಮಾಡೂರು ಇಸುಬು ಕೊಲೆ ಪ್ರಕರಣ: ಆರೋಪಿಗಳಿಬ್ಬರಿಗೆ ಜಾಮೀನು
ಮಂಗಳೂರು, ಜೂ. 10: ಕಾರಾಗೃಹದಲ್ಲಿದ್ದ ಕೈದಿ ಮಾಡೂರು ಇಸುಬು ಕೊಲೆ ಪ್ರಕರಣದ ಆರೋಪಿಗಳಲ್ಲಿ ಇಬ್ಬರಿಗೆ ಹೈಕೋರ್ಟ್ ಜಾಮಿನು ನೀಡಿ ಆದೇಶಿಸಿದೆ.
2015ರ ನವೆಂಬರ್ 2ರಂದು ಬೆಳಗ್ಗೆ 7 ಗಂಟೆಗೆ ನ್ಯಾಯಾಂಗ ಬಂಧನದಲ್ಲಿದ್ದ ಕೈದಿ ಮಾಡೂರು ಇಸುಬು ಎಂಬಾತ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಶೋಭರಾಜ್, ಪ್ರದೀಪ್, ಉಮೇಶ್ ಕುಂಬಾರ, ಲತೀಶ್, ಯುವರಾಜ್ ಇವರು ಮಾರಕಾಸ್ತ್ರಗಳಿಂದ ಇಸುಬು ಮೇಲೆ ಹಲ್ಲೆ ಎರಗಿ ಹಲ್ಲೆ ಮಾಡಿ ಕೊಲೆ ಮಾಡಿರುವ ಪ್ರಕರಣದಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 11 ಮಂದಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಈ ಪೈಕಿ ಆರೋಪಿ 8 ಕಮಲಾಕ್ಷ ಹಾಗೂ ಆರೋಪಿ 9 ಸತೀಶ್ ಆಚಾರಿ ಮೇಲೂ ಮಾರಕಾಸ್ತ್ರ ನೀಡಿ ಕೊಲೆಗೆ ಸಹಕಾರ ನೀಡಿದ್ದಾರೆಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ರಾಜ್ಯ ಉಚ್ಚ ನ್ಯಾಯಾಲಯವು ಕಮಲಾಕ್ಷ ಪೂಜಾರಿ ಮತ್ತು ಸತೀಶ್ ಪೂಜಾರಿ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ಆರ್.ಕೆ.ಮಹದೇವ್ ಮತ್ತು ದಿನಕರ್ ಶೆಟ್ಟಿ ವಾದಿಸಿದ್ದರು.