ಇಡಿಯಡ್ಕದಲ್ಲಿ ಘರ್ಷಣೆ: ಮೂವರಿಗೆ ಗಾಯ
Update: 2016-06-10 20:13 IST
ಮಂಜೇಶ್ವರ, ಜೂ.10: ಇಡಿಯಡ್ಕದಲ್ಲಿ ಎರಡು ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ ಮೂವರು ಗಾಯಗೊಂಡಿದ್ದು, ಈ ಸಂಬಂಧ ಪೊಲೀಸರು ಎರಡು ದೂರುಗಳನ್ನು ದಾಖಲಿಸಿದ್ದಾರೆ.
ವಾಣಿನಗರ ನಿವಾಸಿ ಗೌರಿಶಂಕರ ಆಳ್ವ (46), ಪುತ್ರ ನಿತೀಶ್(24) ಗಾಯಗೊಂಡಿದ್ದು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕನ್ನಟಿಕಾನದ ಸಫೀರ್(22) ಗಾಯಗೊಂಡಿದ್ದು ಚೆಂಗಳ ಸಹಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಘಟನೆ ಸಂಬಂಧ ಗೌರಿಶಂಕರ ಮತ್ತು ನಿತೀಶ್ ನೀಡಿದ ದೂರಿನಂತೆ ಪೆರ್ಲ ನಿವಾಸಿಗಳಾದ ಎ.ಬಿ. ಸಿರಾಜ್ ಸಹಿತ 6 ಮಂದಿ ವಿರುದ್ಧ ದೂರು ದಾಖಲಿಸಲಾಗಿದೆ.
ಸಫೀರ್ ನೀಡಿದ ದೂರಿನಂತೆ ಗೌರಿಶಂಕರ ಆಳ್ವ, ಅಜ್, ಉದಯರಾಜ ವಿರುದ್ಧ ದೂರು ದಾಖಲಿಸಲಾಗಿದೆ. ಪೂರ್ವದ್ವೇಷ ಘಟನೆಗೆ ಕಾರಣವೆನ್ನಲಾಗಿದೆ.