×
Ad

ಪೆರುವಾಯಿ ಚರ್ಚ್‌ನ ನೂತನ ಧರ್ಮಗುರುಗಳಿಂದ ಅಧಿಕಾರ ಸ್ವೀಕಾರ

Update: 2016-06-10 20:32 IST

ಮಂಗಳೂರು, ಜೂ 10: ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ಫಾತಿಮಾ ಮಾತೆಯ ಚರ್ಚ್‌ನ ನೂತನ ಧರ್ಮಗುರುಗಳಾಗಿ ವಂ. ಫಾ.ವಿನೋದ್ ಲೋಬೊ ಅಧಿಕಾರ ಸ್ವೀಕರಿಸಿದ್ದಾರೆ.

ನೂತನ ಧರ್ಮಗುರುಗಳಾದ ಫಾ.ವಿನೋದ್ ಲೋಬೊರನ್ನು ಚರ್ಚ್‌ಗೆ ಊರ ಭಕ್ತರು ಮತ್ತು ಚರ್ಚ್ ಆಡಳಿತದ ಪರವಾಗಿ ಗೌರವಪೂರ್ವಕವಾಗಿ ಸ್ವಾಗತಿಸಲಾಯಿತು. ಈ ವೇಳೆ ಭಕ್ತರು ಧರ್ಮಗುರುಗಳಿಗೆ ಹೂವಿನ ಹಾರ ಹಾಕಿ ಬರಮಾಡಿಕೊಂಡರು. ಈ ಬಳಿಕ ಪ್ರಾರ್ಥನಾ ವಿಧಿ ನೆರವೇರಿಸಿ ಅಧಿಕೃತವಾಗಿ ಅಧಿಕಾರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಫಾ.ವಿನೋದ್ ಲೋಬೋ, ಫಾತಿಮಾ ಮಾತೆಯ ನೂತನ ಧರ್ಮಗುರುವಾಗಿ ಅಧಿಕಾರ ಸ್ವೀಕರಿಸಿದ್ದು ಅತೀವ ಸಂತೋಷ ತಂದಿದೆ. ಇದಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಮುಂದೆ ಈ ದೇವಾಲಯದಲ್ಲಿ ಕಾರ್ಯನಿರ್ವಹಿಸಲು ದೇವರ ಅನುಗ್ರಹ ಬೇಡುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿವಿಧ ಚರ್ಚ್‌ನ ಧರ್ಮಗುರುಗಳು, ಸಾವಿರಾರು ಭಕ್ತರು, ಇತರೆ ಚರ್ಚ್‌ಗಳ ಅನುಯಾಯಿಗಳು ಪಾಲ್ಗೊಂಡಿದ್ದರು. ಫಾ.ಅಂಡ್ರೋ ಡಿಕೋಸ್ತಾ, ಫಾ.ಆಲ್ಫ್ರೆಡ್ ಪಿಂಟೋ, ಮಾರ್ಕ್ ಕ್ಯಾಸ್ಟಲಿನೋ, ಚರ್ಚಿನ ಉಪಾಧ್ಯಕ್ಷ ವಿಕ್ಟರ್, ಕಾರ್ಯದರ್ಶಿ ಪ್ರವೀಣ್ ಕುಟಿನ್ಹೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News