×
Ad

ಕೋಡಿಜಾಲ್ ರಿಫಾಯಿ ಜುಮಾ ಮಸೀದಿಯಲ್ಲಿ ರಮಝಾನ್ ಪ್ರವಚನ

Update: 2016-06-10 20:37 IST

ಮಂಗಳೂರು, ಜೂ.10: ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ವತಿಯಿಂದ ರಮಝಾನ್ ಪ್ರಯುಕ್ತ ಪ್ರತಿ ರವಿವಾರದಂದು ಲುಹರ್ ನಮಾಝಿನ ಬಳಿಕ ಕೋಡಿಜಾಲ್ ರಿಫಾಯಿ ಜುಮಾ ಮಸೀದಿಯಲ್ಲಿ ಪ್ರಮುಖ ವಾಗ್ಮಿಗಳಿಂದ ‘ಧಾರ್ಮಿಕ ಪ್ರವಚನ’ ನಡೆಯಲಿದೆ.

12ರಂದು ಕುಂಜತ್ತೂರು ಜುಮಾ ಮಸೀದಿಯ ಖತೀಬ್ ಕೆ. ಹಾಶಿರ್ ಹಾಮಿದಿ ಅವರಿಂದ ‘ರಂಝಾನ್ ಮಹತ್ವ ಮತ್ತು ಸೂರ: ಫಾತಿಹ ವ್ಯಾಖ್ಯಾನ’, 19ರಂದು ಕಿನ್ಯ ಕೇಂದ್ರ ಜುಮಾ ಮಸೀದಿಯ ಖತೀಬ್‌ಖಾಸಿಂ ದಾರಿಮಿ ಸವಣೂರು ಅವರಿಂದ ‘ಮಡಕ್ಕುಲ್ಲಾತ ಯಾತ್ರ!!’ 26ರಂದು ಮತ್ತು ಜುಲೈ 3ರಂದು ಕಾಸರಗೋಡು ಜುಮಾ ಮಸೀದಿಯ ಖತೀಬ್ ಪಿ.ಎ ಝಬೈರ್ ದಾರಿಮಿ ಅವರಿಂದ ‘ಲೈಲತುಲ್ ಖದರ್’ ಮತ್ತು ‘ಝಕಾತ್ ಮತ್ತು ಫಿತ್ರ್’ ವಿಷಯಗಳಲ್ಲಿ ಪ್ರವಚ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.


ಖಿದ್ಮತುಲ್ ಇಸ್ಲಾಮ್ ಎಸೋಸಿಯೇಶನ್,ಕೋಡಿಜಾಲ್ ಮತ್ತು ದಮಾಮ್ ಘಟಕ ಹಾಗೂ ಜಮಿಯ್ಯತುಲ್ ಫಲಾಹ್ ಮಂಗಳೂರು
ಮತ್ತು  ದಾನಿಗಳ ನೆರವಿನಿಂದ ರಂಜಾನ್ ಕಿಟ್ ಅನ್ನು ಜಮಾತಿಗೊಳಪಟ್ಟ ಆಯ್ದ ಫಲಾನುಭವಿಗಳಿಗೆ  ಜೂನ್ 12ರಂದು ಆದಿತ್ಯವಾರ  ಲುಹರ್ ನಮಾಜಿನ ಬಳಿಕ ಕೋಡಿಜಾಲ್ ರಿಫಾಯಿ ಜುಮಾ ಮಸ್ಜಿದ್ ವಠಾರದಲ್ಲಿ ಜಮಾತಿನ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಕೋಡಿಜಾಲ್ ರವರ ನೇತೃತ್ವದಲ್ಲಿ  ಜಮಾತಿನವರ ಗೌರವ ಉಪಸ್ಥಿತಿಯಲ್ಲಿ  ವಿತರಿಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News