ಬೆಳೆಯುತ್ತಿರುವ ಭಾರತ-ಅಮೆರಿಕ ಬಾಂಧವ್ಯ ಪಾಕಿಸ್ತಾನಕ್ಕೆ ಕಳವಳ

Update: 2016-06-10 15:15 GMT

ಇಸ್ಲಾಮಾಬಾದ್, ಜೂ. 10: ಭಾರತ ಮತ್ತು ಅಮೆರಿಕಗಳ ನಡುವೆ ಬೆಳೆಯುತ್ತಿರುವ ವ್ಯೆಹಾತ್ಮಕ ಸಂಬಂಧಗಳ ಬಗ್ಗೆ ಪಾಕಿಸ್ತಾನ ಗುರುವಾರ ಕಳವಳ ವ್ಯಕ್ತಪಡಿಸಿದೆ ಹಾಗೂ ತನಗೆ ಬೇಕಾದಾಗ ಅಮೆರಿಕ ಪಾಕಿಸ್ತಾನದ ಬಳಿ ಬರುತ್ತದೆ ಹಾಗೂ ಅಗತ್ಯವಿಲ್ಲದಾಗ ಕೈಬಿಡುತ್ತದೆ ಎಂದು ಅದು ಆರೋಪಿಸಿದೆ.

‘‘ದ್ವಿಪಕ್ಷೀಯ ಸಂಬಂಧಗಳಲ್ಲಿನ ಇತ್ತೀಚಿನ ಏರಿಳಿತಗಳ ಕುರಿತ ತನ್ನ ಕಳವಳವನ್ನು ಪಾಕಿಸ್ತಾನ ಅಮೆರಿಕಕ್ಕೆ ವ್ಯಕ್ತಪಡಿಸುವುದು’’ ಎಂದು ಪಾಕಿಸ್ತಾನದ ಪ್ರಧಾನಿಯ ವಿದೇಶ ವ್ಯವಹಾರಗಳ ಸಲಹಾಕಾರ ಸರ್ತಾಝ್ ಅಝೀಝ್ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯ ಅಮೆರಿಕ ಪ್ರವಾಸದ ವೇಳೆ ಉಭಯ ರಾಷ್ಟ್ರಗಳು ವಿವಿಧ ರಕ್ಷಣಾ ಒಪ್ಪಂದಗಳಿಗೆ ಸಹಿ ಹಾಕಿದ ಒಂದು ದಿನದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಪರಮಾಣು ಪೂರೈಕೆದಾರರ ಗುಂಪಿಗೆ (ಎನ್‌ಎಸ್‌ಜಿ) ಭಾರತದ ಸೇರ್ಪಡೆಯನ್ನು ಬೆಂಬಲಿಸಿರುವುದಕ್ಕಾಗಿಯೂ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಜೊತೆ ಪಾಕಿಸ್ತಾನ ಮುನಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News