ಪುತ್ತೂರು: ಬಸ್‌ಗಳ ಮುಖಾಮುಖಿ ಡಿಕ್ಕಿ
Update: 2016-06-10 20:59 IST
ಪುತ್ತೂರು, ಜೂ.10: ಖಾಸಗಿ ಬಸ್ಸುಗಳೆರಡು ಪರಸ್ಪರ ಮುಖಾಮುಖಿ ಢಿಕ್ಕಿಯಾದ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಪುತ್ತೂರು ತಾಲೂಕಿನ ಕಬಕದ ಪೋಳ್ಯ ಸಮೀಪ ಶುಕ್ರವಾರ ನಡೆದಿದೆ.
ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್, ಸರಕಾರಿ ಬಸ್ಸೊಂದನ್ನು ಹಿಂದಿಕ್ಕುವ ಭರದಲ್ಲಿ ಮುಂಭಾಗದಿಂದ ಆಗಮಿಸುತ್ತಿದ್ದ ಇನ್ನೊಂದು ಖಾಸಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಬಸ್ ರಸ್ತೆಯಿಂದ ಬದಿಗೆ ಸರಿದ ಕಾರಣ, ಬಸ್‌ನ ಹಿಂಬದಿಗೆ ಢಿಕ್ಕಿಯಾಗಿದೆ.
ಘಟನೆಯಿಂದ ಮಹಿಳೆಯೋರ್ವರ ಕೈಗೆ ಗಾಯವಾಗಿದ್ದು, ಹಲವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ. ಪುತ್ತೂರು ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.