ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ.ಎಸ್.ಕೃಷ್ಣ ಭಟ್ ನಿಧನ
ಮಂಗಳೂರು, ಜೂ.10: ಕರ್ಣಾಟಕ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಎಂ.ಎಸ್.ಕೃಷ್ಣ ಭಟ್ (78) ಶುಕ್ರವಾರ ನಿಧನರಾಗಿದ್ದಾರೆ.
ಕೃಷ್ಣ ಭಟ್‌ರವರು 1970ರಲ್ಲಿ ಕರ್ಣಾಟಕ ಬ್ಯಾಂಕ್‌ಗೆ ಸೇರಿ 1989ರಲ್ಲಿ ಬ್ಯಾಂಕಿನ ಮಹಾಪ್ರಬಂಧಕರಾಗಿ ಹುದ್ದೆಯನ್ನು ನಿರ್ವಹಿಸಿ 1995ರಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಎರಡು ವರ್ಷ ಕಾರ್ಯನಿರ್ವಹಿಸಿದ್ದರು. ಬಳಿಕ ಮೂರು ವರ್ಷ ಅಧ್ಯಕ್ಷ ಹುದ್ದೆಯಲ್ಲಿ ಅವರು ಮುಂದುವರಿದಿದ್ದರು.
ಎಂ.ಎಸ್.ಕೃಷ್ಣ ಭಟ್‌ರ ಸಮರ್ಥ ನಾಯಕತ್ವದಲ್ಲಿ ಕರ್ಣಾಟಕ ಬ್ಯಾಂಕ್ ಗಮನಾರ್ಹ ಸಾಧನೆ ಮಾಡಿದೆ. ಬ್ಯಾಂಕಿನ ಶೇರುಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿರುವುದರೊಂದಿಗೆ ಬಂಡವಾಳ ಸಂಗ್ರಹದೊಂದಿಗೆ ಅವರ ತ್ವರಿತ ನಿರ್ಧಾರ, ದೂರದೃಷ್ಟಿ ಯೋಜನೆಯ ಪರಿಣಾಮವಾಗಿ ಬ್ಯಾಂಕ್ ಆರ್ಥಿಕ ವ್ಯವಹಾರದಲ್ಲಿ ಕೈಗಾರಿಕೆಗಳ ಬೆಳವಣಿಗೆಯ ಪ್ರಮಾಣಕ್ಕಿಂತಲೂ ಅಧಿಕ ಪ್ರಮಾಣದ ಬೆಳವಣಿಗೆಯ ಗತಿಯನ್ನು ಸಾಧಿಸಿದೆ.
ಅವರು ಅಧ್ಯಕ್ಷರಾಗಿದ್ದಾಗ ಬ್ಯಾಂಕ್ ಸಿಆರ್‌ಐಎಸ್‌ಐಎಲ್‌ನಿಂದ ಗರಿಷ್ಠ ಠೇವಣಿ ಸಂಗ್ರಹಕ್ಕೆ ಪಿಒನ್ ಪ್ರಮಾಣ ಪತ್ರವನ್ನು ಪಡೆದಿದೆ. ‘ಕೃಷ್ಣ ಭಟ್‌ರ ನಿಧನ ದಿಂದ ಬ್ಯಾಂಕಿಂಗ್ ಕ್ಷೇತ್ರದ ಓರ್ವ ಸಮರ್ಥ ನಾಯಕನನ್ನು ಕಳೆದು ಕೊಂಡಂತಾಗಿದೆ ’ಎಂದು ಕರ್ಣಾಟಕ ಬ್ಯಾಂಕ್ ಆಡಳಿತ ಮಂಡಳಿ ಸಂತಾಪ ಸೂಚಿಸಿದೆ.