×
Ad

ಮೀನುಗಾರಿಕೆ ನಡೆಸುತ್ತಿದ್ದ ಕೊಚ್ಚಿಯ ಬೋಟ್ ವಶಕ್ಕೆ

Update: 2016-06-10 23:10 IST

ಮಂಗಳೂರು, ಜೂ. 10: ಮಂಗಳೂರಿನ ಬಂದರಿನಲ್ಲಿ ನಿಷೇಧದ ನಡುವೆಯೂ ಮೀನುಗಾರಿಕೆ ನಡೆಸುತ್ತಿದ್ದ ಕೊಚ್ಚಿಯ ಎರಡು ಮೀನುಗಾರಿಕಾ ಬೋಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಹೊರ ರಾಜ್ಯದ ಎರಡು ಬೋಟುಗಳ ಬಗ್ಗೆ ಸ್ಥಳೀಯರು ಮೀನುಗಾರಿಕಾ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಈ ಬಗ್ಗೆ ಅಧಿಕಾರಿಗಳು ಪೊಲೀಸರನ್ನು ಕರೆಸಿ ಕೊಚ್ಚಿಯ ಎರಡೂ ಮೀನುಗಾರಿಕಾ ಬೋಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೀನುಗಾರಿಕೆಗೆ ಕೆಲವು ಕಾಲ ನಿಷೇಧ ಹೇರಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News