×
Ad

ನರೇಶ್ ಶೆಣೈಯ ಬ್ಯಾಂಕ್ ಖಾತೆಗಳು ಸ್ಥಗಿತ

Update: 2016-06-10 23:14 IST

ಮಂಗಳೂರು, ಜೂ. 10: ನಗರದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ನರೇಶ್ ಶೆಣೈಗೆ ಬಂಧನಕ್ಕಾಗಿ ಪೊಲೀಸರು ಆತನ ಬ್ಯಾಂಕ್ ಖಾತೆಗಳನ್ನು ಸ್ತಬ್ಧಗೊಳಿಸಿದ್ದಾರೆ.

ನರೇಶ್ ಶೆಣೈ ಹೈಕೋರ್ಟ್‌ನಲ್ಲಿ ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದ್ದು, ಇದೇ ವೇಳೆ ತನಿಖಾ ತಂಡವು ನರೇಶ್ ಶೆಣೈಗೆ ಸೇರಿದೆ ಎನ್ನಲಾಗಿರುವ ಐದು ಬ್ಯಾಂಕ್ ಖಾತೆಗಳ ವ್ಯವಹಾರಗಳನ್ನು ಸ್ಥಗಿತಗೊಳಿಸಿದ್ದಾರೆ.

ಮುಂದೆ ನರೇಶ್ ಶೆಣೈಯ ಆಸ್ತಿಗಳ ಮುಟ್ಟುಗೋಲಿಗೆ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News