ವೀಸಾ ಕೊಡಿಸುವುದಾಗಿ ವಂಚನೆ: ದೂರು
Update: 2016-06-10 23:18 IST
ಮಂಗಳೂರು, ದೂ. 12: ವಿದೇಶದಲ್ಲಿ ಉದ್ಯೋಗಕ್ಕಾಗಿ ವೀಸಾ ಕೊಡಿಸುವುದಾಗಿ ಹಣ ಸಂಗ್ರಹಿಸಿ ಮೋಸ ಮಾಡಿರುವ ಕುರಿತು ನಗರ ಪೂರ್ವ ಠಾಣೆಯಲ್ಲಿ ಪೊಲೀಸ್ ದೂರು ದಾಖಲಾಗಿದೆ.
ಬೊಂಡಂತಿಲ ನಿವಾಸಿ ಅವಿಲ್ ಅರುಣ್ ದೂರು ನೀಡಿದವರು. ಉದ್ಯೋಗ ಸಂಸ್ಥೆಯ ನಿದೇರ್ಶಕರ ಸಹಿತ 6 ಮಂದಿಯ ವಿರುದ್ಧ ದೂರು ದಾಖಲಾಗಿದೆ. ೆರ್ನಾಂಡೀಸ್ ಅವರಿಂದ 7,22,500 ರೂ. ಹಣ ಪಡೆದು ನಕಲಿ ದಾಖಲೆ ಸೃಷ್ಟಿಸಿ ಬಳಿಕ ಉದ್ಯೋಗ ನೀಡದೆ ಹಾಗೂ ಹಣ ಹಿಂದಿರುಗಿಸದೆ, ಹಣ ವಾಪಸ್ ಕೇಳಿದಾಗ ಜೀವಬೆದರಿಕೆ ಒಡ್ಡಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.