ಪಿ.ಎ. ಇಂಜಿನಿಯರಿಂಗ್ ಕಾಲೇಜು: ಶುಲ್ಕ ವಿನಾಯಿತಿ ಕೋಟಾದಡಿ ಬಿ.ಇ. ಕೋರ್ಸ್‌ಗಳಿಗೆ ಪ್ರವೇಶಾತಿ ಆರಂಭ
ಮಂಗಳೂರು, ಜೂ.10: ಪಿ.ಎ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಕಾರ ನಡೆಸಿದ ಪ್ರವೇಶ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಿಂದ ಶುಲ್ಕ ವಿನಾಯಿತಿ (70 ಶೇ.) ಕೋಟಾದಡಿ 2016-17ನೆ ಶೈಕ್ಷಣಿಕ ಸಾಲಿನ ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಅರ್ಜಿ ಅಹ್ವಾನಿಸಲಾಗಿದೆ.
ಇಂಜಿನಿಯರಿಂಗ್ ವಿಭಾಗದ ಎಲ್ಲ ಕೋರ್ಸ್‌ಗಳಲ್ಲಿ ಕೆಲವೊಂದು ಆಡಳಿತ ಮಂಡಳಿಯ ಸೀಟುಗಳನ್ನು ಈ ಕೋಟಾದಡಿ ಕಾಯ್ದಿರಿಸಲಾಗಿದೆ. ಈ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಿಂದ ಸಿ.ಇ.ಟಿ. ಶುಲ್ಕ ಮಾತ್ರ ಪಡೆದು ಸೀಟು ಹಂಚಿಕೆ ಮಾಡಲಾಗುವುದು. ಸಿ.ಇ.ಟಿ.ಯಲ್ಲಿ ತಮ್ಮ ಆಯ್ಕೆಯ ಸೀಟು ಮತ್ತು ಕಾಲೇಜು ಸಿಗುವ ಬಗ್ಗೆ ಭರವಸೆ ಇಲ್ಲದ ಆಸಕ್ತ ವಿದ್ಯಾರ್ಥಿಗಳು ಪಿ.ಯು.ಸಿ. ಅಂಕಪಟ್ಟಿ ಹಾಗೂ ಸಿ.ಇ.ಟಿ. ರ್ಯಾಂಕಿಂಗ್ ದಾಖಲೆಯೊಂದಿಗೆ ಖುದ್ದಾಗಿ ಕಚೇರಿ ಕೆಲಸದ ದಿನಗಳಲ್ಲಿ ಅರ್ಜಿ ಸಲ್ಲಿಸುವಂತೆ ಪ್ರಕಟನೆೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ದೂ.ಸಂ.: 0824-2284701/ 02/03/04 ಅಥವಾ ಮೊ.ಸಂ.: 9980022000/7795665779/990079065ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.