×
Ad

ಹಿರಿಯ ಕಾಂಗ್ರೆಸ್ ಮುಖಂಡ ವೇಳುತಂಬು

Update: 2016-06-10 23:51 IST

ಕಾಸರಗೋಡು, ಜೂ.10: ಹಿರಿಯ ಕಾಂಗ್ರೆಸ್ ನಾಯಕ ಕೆ. ವೇಳುತಂಬು (79) ಶುಕ್ರವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು.
 ಕಳೆದ ಐದೂವರೆ ದಶಕಗಳಿಂದ ಅವಿಭಜಿತ ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರೆಂದು ಗುರುತಿಸಲ್ಪಟ್ಟಿದ್ದರು. ರಾಜ್ಯ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷ ಸೇರಿದಂತೆ ಹಲವು ಸ್ಥಾನಗಳನ್ನು ಅಲಂಕರಿಸಿದ್ದರು.
ಪಾರ್ಥಿವ ಶರೀರವನ್ನು ಮಧ್ಯಾಹ್ನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕಿಡಲಾಯಿತು.
    ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್, ಶಾಸಕರಾದ ಎನ್.ಎ. ನೆಲ್ಲಿಕುನ್ನು, ಪಿ.ಬಿ. ಅಬ್ದುರ್ರಝಾಕ್, ಮಾಜಿ ಸಚಿವರಾದ ಸಿ.ಟಿ. ಅಹ್ಮದಾಲಿ, ಚೆರ್ಕಳಂ ಅಬ್ದುಲ್ಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ. ಕೆ.ಶ್ರೀಧರನ್, ಜಿಪಂ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಂತಿಮ ನಮನ ಸಲ್ಲಿಸಿದರು.
ಬಳಿಕ ಪಾರ್ಥಿವ ಶರೀರವನ್ನು ಹುಟ್ಟೂರಾದ ತ್ರಿಕ್ಕರಿಪುರಕ್ಕೆ ಕೊಂಡೊಯ್ದು ಕಾಂಗ್ರೆಸ್ ಕಚೇರಿಯಲ್ಲಿ ಅಂತಿಮ ದರ್ಶನಕ್ಕಿಡಲಾಯಿತು. ನಂತರ ಮನೆಗೆ ಕೊಂಡೊಯ್ದು ಸಂಜೆ ಅಂತ್ಯಕ್ರಿಯೆ ನೆರವೇರಿಸಲಾಯಿತು.
   ವೇಳುತಂಬು ಅವರ ನಿಧನಕ್ಕೆ ಕೇಂದ್ರದ ಮಾಜಿ ಸಚಿವ ಎ.ಕೆ.ಆ್ಯಂಟನಿ, ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ, ಕೆಪಿಸಿಸಿ ಅಧ್ಯಕ್ಷ ವಿ.ಎಂ. ಸುಧೀರನ್, ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಸಂತಾಪ ವ್ಯಕ್ತಪಡಿಸಿದ್ದಾರೆ
ಸೇವಕರಾಗಿ ಜನಪ್ರಿಯರಾಗಿದ್ದರು.
ನಬೀಸಾ
ಮಂಜೇಶ್ವರ, ಜೂ.10: ಉಮ್ರಾಗೆ ತೆರಳಿದ್ದ ಮಚ್ಚಂಪಾಡಿ ನಿವಾಸಿಯೊಬ್ಬರು ಮದೀನಾದಲ್ಲಿ ನಿಧನ ಹೊಂದಿದ್ದಾರೆ. ಮಚ್ಚಂಪಾಡಿ ಹಳೆ ಮನೆಯ ದಿ.ಅಂದುಞ್ಞೆ ಎಂಬವರ ಪತ್ನಿ ನಬೀಸಾ (75) ಮೃತಪಟ್ಟವರು.
 ಮೇ 17ರಂದು ಉಪ್ಪಳದ ಖಾಸಗಿ ಉಮ್ರಾ ಸರ್ವೀಸ್ ಮಗಳೊಂದಿಗೆ ಉಮ್ರಾಕ್ಕೆ ತೆರಳಿದ್ದ ಇವರು ಮದೀನಾದಲ್ಲಿ ಆರೋಗ್ಯ ಕಳೆದುಕೊಂಡಿದ್ದರು. ತಕ್ಷಣ ಮದೀನಾದಲ್ಲಿರುವ ಅಲ್ ಅನ್ಸಾರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ ನಿಧನರಾಗಿದ್ದಾರೆ.
 ಚಂದ್ರಕಲಾ ಕಾಮತ್
 ಮೂಡುಬಿದಿರೆ, ಜೂ.10: ಮದುವಣಗಿತ್ತಿಯರ ಅಲಂಕಾರ ತಜ್ಞೆಯಾಗಿ ಗುರುತಿಸಿಕೊಂಡಿದ್ದ ಮೂಡುಬಿದಿರೆ ನಿವಾಸಿ ಚಂದ್ರಕಲಾ ಕಾಮತ್ (72) ಅಲ್ಪಕಾಲದ ಅಸೌಖ್ಯದಿಂದ ಸುರತ್ಕಲ್‌ನಲ್ಲಿರುವ ತಮ್ಮ ಪುತ್ರಿಯ ನಿವಾಸದಲ್ಲಿ ಗುರುವಾರ ನಿಧನ ಹೊಂದಿದರು. ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಎಂಭತ್ತರ ದಶಕದಲ್ಲಿ ಅಪರೂಪವೆನಿಸಿದ್ದ ಬ್ಯೂಟೀಶಿ ಯನ್ ಕೋರ್ಸ್‌ನ್ನು ಮುಂಬೈನಿಂದ ಪೂರೈಸಿಕೊಂಡು ಮೆಹೆಂದಿ, ಕೇಶ ವಿನ್ಯಾಸ, ಪುಷ್ಪಾಲಂಕಾರದಲ್ಲಿ ಗಮನ ಸೆಳೆದ ಚಂದ್ರಕಲಾ ಸರ್ವಧರ್ಮೀಯ ಮದುವಣಗಿತ್ತಿಯರಿಗೆ ಸಾಂಪ್ರದಾಯಿಕ ವಸ್ತ್ರಾಲಂಕಾರ ಹಾಗೂ ಪುಷ್ಪಾಲಂಕಾರದಲ್ಲಿ ಪರಿಣತೆಯಾಗಿ ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಸಹಿತ ಮಹಾರಾಷ್ಟ್ರ, ತಮಿಳುನಾಡು, ಕೇರಳ ಹೀಗೆ ಹೊರರಾಜ್ಯಗಳಲ್ಲಿಯೂ ಅವರು ಆಹ್ವಾನಿತರಾಗಿ ಪುಷ್ಪಾಲಂಕಾರ, ಮದುವಣಗಿತ್ತಿಯರ ಅಲಂಕಾರವನ್ನು ನಡೆಸಿದ್ದರು. ಮೂಡುಬಿದಿರೆಯ ಶ್ರೀಶಾರದಾ ಮಹೋತ್ಸವದಲ್ಲಿಯೂ 2 ದಶಕಗಳಿಗೂ ಮಿಕ್ಕಿ ದೇವಿಯ ಶೋಭಾಯಾತ್ರೆಗೆ ಪೂರ್ವಭಾವಿಯಾಗಿ ನಡೆಸುವ ಮಲ್ಲಿಗೆಯ ಜಲ್ಲಿ ಮುಡಿಸುವ ಸೇವೆಯನ್ನು ನಡೆಸಿಕೊಂಡು ಬಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News