×
Ad

ಮೊಬೈಲ್ ಫೋನ್ ಕಳೆದುಹೋಯಿತೇ ? ಇನ್ನು ಅದನ್ನೂ ಗೂಗಲ್ ನಲ್ಲಿ ಹುಡುಕಿ !

Update: 2016-06-11 15:06 IST

ನ್ಯೂಯಾರ್ಕ್, ಜೂ.11: ಸ್ಮಾರ್ಟ್ ಫೋನ್ ಕಳೆದು ಹೋದಲ್ಲಿ ಅದನ್ನು ಹುಡುಕಲು ಸಹಾಯವಾಗುವಂತಹ ಟೂಲ್ ಒಂದನ್ನು ಸರ್ಚ್ ಇಂಜಿನ್ ಕ್ಷೇತ್ರದ ದೈತ್ಯ ಗೂಗಲ್ ಅಭಿವೃದ್ಧಿ ಪಡಿಸಿದೆ.

ಈ ಫೀಚರನ್ನು ಉಪಯೋಗಿಸಲು ಬಳಕೆದಾರರು ‘‘ಐ ಲಾಸ್ಟ್ ಮೈ ಫೋನ್’’ (ನನ್ನ ಫೋನ್ ಕಳೆದು ಹೋಗಿದೆ) ಎಂದು ಗೂಗಲ್ ನಲ್ಲಿ ಟೈಪ್ ಮಾಡಬೇಕು. ಆಗ ಒಂದು ವಿಶೇಷ ಪೇಜ್ ಕಾಣಿಸುತ್ತದೆಯಲ್ಲದೆ ಅಲ್ಲಿ ಎಲ್ಲಾ ಸಾಧನಗಳ ದಾಖಲೆಗಳು ಇರುತ್ತವೆ. ಬಳಕೆದಾರರು ತಮ್ಮ ಕಳೆದು ಹೋದ ಮೊಬೈಲ್ ಫೋನ್ ಹೆಸರಿಗೆ ಕ್ಲಿಕ್ ಮಾಡಬೇಕು.

ಇದರ ಹೊರತಾಗಿ ನಕ್ಷೆಯಲ್ಲಿ ತಮ್ಮ ಫೋನ್ ಈಗ ಯಾವ ಸ್ಥಳದಲ್ಲಿದೆಯೆಂದು ನೋಡುವ ಅವಕಾಶವೂ ಇದೆ. ಅವರು ಮೊಬೈಲ್ ಫೋನಿನ ಸ್ಕ್ರೀನನ್ನು ತಮ್ಮ ಗೂಗಲ್ ಪೇಜ್ ಮುಖಾಂತರವೇ ಲಾಕ್ ಮಾಡುವ ಫೀಚರ್ ಕೂಡ ಲಭ್ಯವಿದೆ. ಆಂಡ್ರಾಯ್ಡಾ ಸಾಧನಗಳಿಗಷ್ಟೇ ಈ ಫೀಚರ್ ಉಪಯುಕ್ತವಾಗಲಿದೆ. ನಿಮ್ಮ ಐಫೋನ್ ಕಳೆದು ಹೋಗಿದೆಯೆಂದಾದರೆ ‘ಫೈಂಡ್ ಮೈ ಐಫೋನ್’ ಎಂದು ಬರೆದು ಸರ್ಚ್ ಇಂಜಿನ್ ಬಟನ್ ಕ್ಲಿಕ್ ಮಾಡುವಂತೆ ಅದು ಹೇಳುತ್ತದೆ. ಆಪಲ್ ಕೂಡ ಐಓಎಸ್ ಸಾಧನಗಳಿಗೆ ಇಂತಹುದೇ ಸೇವೆ ಒದಗಿಸುತ್ತದೆ.

ಐಫೋನ್ ಬಳಕೆದಾರರು ಕೂಡ ತಮ್ಮ ಪ್ರೈವೆಸಿಯನ್ನು ಕಾಪಾಡಲು ತಮ್ಮ ಗೂಗಲ್ ಖಾತೆಗಳನ್ನು ಲಾಕ್ ಮಾಡುವ ಸೌಕರ್ಯವಿದೆ. ಇದರ ಹೊರತಾಗಿ ಬಳಕೆದಾರರ ಖಾತೆಯ ಕುರಿತಾದ ಮಾಹಿತಿ ಹಾಗೂ ಆದ್ಯತೆಗಳನ್ನು ತೋರಿಸುವ ಪೇಜಿಗೆ ಹೋಗುವ ಅವಕಾಶವೂ ಇದೆ. ಬಳಕೆದಾರರು ‘ಓಕೆ ಗೂಗಲ್, ಶೋ ಮೀ ಮೈ ಅಕೌಂಟ್’ ಎಂದಷ್ಟೇ ಟೈಪ್ ಮಾಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News