ಕ್ರೆಡೈ, ಡೈಸ್‌ನಿಂದ ಕಟ್ಟಡ ಸಾಮಗ್ರಿ ಮತ್ತು ಆರ್ಕಿಟೆಕ್ಟ್‌ಗಳ ಪ್ರದರ್ಶನ

Update: 2016-06-11 10:10 GMT

ಮಂಗಳೂರು, ಜೂ.11: ಮಂಗಳೂರಿನ ಕ್ರೆಡೈ ಸಹಯೋಗದಲ್ಲಿ ಡಿಸೈನ್ ಇಂಟಿರಿಯರ್ ಕನ್‌ಸ್ಟ್ರಕ್ಷನ್ ಇಂಜಿನಿಯರಿಂಗ್ (ಡೈಸ್)ನಿಂದ ಕಟ್ಟಡ ಸಾಮಾಗ್ರಿ ಮತ್ತು ಆರ್ಕಿಟೆಕ್ಟ್‌ಗಳ ಎರಡು ದಿನಗಳ ಪ್ರದರ್ಶನವನ್ನು ಇಂದು ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ಮನಪಾ ಆಯುಕ್ತ ಡಾ.ಎಚ್.ಗೋಪಾಲಕೃಷ್ಣ ಉದ್ಘಾಟಿಸಿದರು.

ಶನಿವಾರ ಮತ್ತು ರವಿವಾರದಂದು ನಡೆಯುವ ಪ್ರದರ್ಶನದಲ್ಲಿ ಸುಮಾರು ವಿವಿಧ 50 ಕಂಪೆನಿಗಳು ಕಟ್ಟಡ ಸಾಮಾಗ್ರಿ ಮತ್ತು ಆರ್ಕಿಟೆಕ್ಟ್‌ಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ. ಮಂಗಳೂರಿನಲ್ಲಿ ಪ್ರಥಮವಾಗಿ ನಡೆಯುತ್ತಿರುವ ಪ್ರದರ್ಶನ ಇದಾಗಿದ್ದು ಸ್ಟೀಲ್, ಲೈಟ್, ಇಂಟಿರೀಯರ್ ಪ್ರಾಡಕ್ಟ್‌ಗಳು, 4 ಡಿ ಸೆಕ್ಯೂರಿಟಿ ಸಿಸ್ಟಮ್ಸ್, ಟೈಲ್ಸ್, ಸಿರಾಮಿಕ್ ಸೇರಿದಂತೆ 29 ವಿಭಾಗಗಳ ಮಳಿಗೆಗಳು ಗಮನಸೆಳೆದವು.ಯೂರೋಫ್ ದೇಶಗಳಿಂದ ಆಮದು ಮಾಡಿ ನಿರ್ಮಿಸಲಾಗುವ ಮರದ ಮನೆಯು ಗ್ರಾಹಕರ ಆಕರ್ಷಣೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ಮೂಡ ಕಮೀಷನರ್ ಮುಹಮ್ಮದ್ ನಝೀರ್,ಮನಪಾ ಉಪ ಆಯುಕ್ತ ಗೋಕುಲ್ ದಾಸ್ ನಾಯಕ್ , ಕ್ರೆಡೈ ಅಧ್ಯಕ್ಷ ಡಿ .ಬಿ.ಮೆಹ್ತಾ, ಕಾರ್ಯದರ್ಶಿ ನವೀನ್ ಕಾಡೋಝ,ಉಪಾಧ್ಯಕ್ಷ ಧೀರಜ್ ಅಮೀನ್, ಎಸಿಸಿಇ(ಐ) ಮಂಗಳೂರು ವಿಭಾಗದ ಚೇರ್‌ಮೆನ್ ವಿನಾಯಕ್ ಪೈ, ಮಾಜಿ ಚೇರ್‌ಮೆನ್ ವಿಜಯ್ ವಿಷ್ಣು ಮಯ್ಯ, ಆರ್ಕಿಟೆಕ್ಟ್‌ಗಳಾದ ಗುಲ್ಶನ್ ರಾಯ್, ಪ್ರವೀಣ್ ಸಲ್ದಾನ, ಪೀಟರ್ ಮಸ್ಕರೇನಸ್, ಪಾಲ್ ಮಸ್ಕರೇನಸ್, ಮುಹಮ್ಮದ್ ನಿಸಾರ್,ಐಐಎ ಅಧ್ಯಕ್ಷ ಕುಮಾರ್ ಚಂದ್ರನ್, ಕಾರ್ಯಕ್ರಮ ನಿರ್ದೇಶಕಿ ನೇಹಾ ಬಾಪ್ನ, ಆಯೋಜಕ ಭರತ್ ಬಲಾನಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News