×
Ad

ವಿಶೇಷ ಅದಾಲತ್‌ನಲ್ಲಿ 75 ಲಕ್ಷ ರೂ. ಪರಿಹಾರ ವಿತರಣೆ

Update: 2016-06-11 17:05 IST

ಮಂಗಳೂರು, ಜೂ.11: ನಗರದ ಮಿನಿ ವಿಧಾನಸೌಧದಲ್ಲಿ ಇಂದು ಬೆಳಗ್ಗಿನಿಂದ ಸಂಜೆಯವರೆಗೆ ರಾಷ್ಟ್ರೀಯ ಹೆದ್ದಾರಿ ಭೂಸ್ವಾಧೀನ ಪರಿಹಾರಕ್ಕೆ ಸಂಬಂಧಿಸಿದ ವಿಶೇಷ ಅದಾಲತ್‌ನಲ್ಲಿ ಒಟ್ಟು 75 ಲಕ್ಷ ರೂ. ಪರಿಹಾರ ವಿತರಣೆಯಾಗಿದೆ.

ಅದಾಲತ್‌ನಲ್ಲಿ ಪರಿಹಾರ ಕೋರಿ 25 ಅರ್ಜಿಗಳು ಬಂದಿದ್ದು, ಈ ಪೈಕಿ 23 ಅರ್ಜಿಗಳು ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಇತ್ಯರ್ಥವಾದ ಹೆಚ್ಚುವರಿ ಪರಿಹಾರಕ್ಕಾಗಿನ ಅರ್ಜಿಗಳು.

ಈ ಪ್ರಕರಣಗಳಿಗೆ ಸಂಬಂಧಿಸಿ ಒಟ್ಟು 46 ಲಕ್ಷ ರೂ. ಪರಿಹಾರ ಹಾಗೂ ಉಳಿದ ಎರಡು ಪ್ರಕರಣಗಳಿಗೆ 29 ಲಕ್ಷ ರೂ. ಪರಿಹಾರವನ್ನು ಇಂದು ವಿತರಿಸಲಾಗಿದೆ ಎಂದು ಮಂಗಳೂರು ಉಪ ವಿಭಾಗಾಧಿಕಾರಿ ಡಾ. ಅಶೋಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News