ಬಾಂಗ್ಲಾ: ದೇಶವ್ಯಾಪಿ ದಾಳಿ; 1,600 ಬಂಧನ
Update: 2016-06-11 20:35 IST
ಢಾಕಾ, ಜೂ. 11: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ಮಾನವಹಕ್ಕುಗಳ ಕಾರ್ಯಕರ್ತರ ಮೇಲೆ ಮಾರಣಾಂತಿಕ ದಾಳಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ, ದೇಶವ್ಯಾಪಿ ದಾಳಿ ನಡೆಸಿರುವ ಪೊಲೀಸರು ಸುಮಾರು 1,600 ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪೊಲೀಸರು ಮತ್ತು ಅರೆಸೈನಿಕ ಪಡೆಗಳು ಗುರುವಾರ ರಾತ್ರಿ ದೇಶಾದ್ಯಂತ ಭಯೋತ್ಪಾದಕ ಅಡಗುದಾಣಗಳ ಮೇಲೆ ದಾಳಿ ನಡೆಸಿದರು ಹಾಗೂ 24 ತಾಸುಗಳ ಅವಧಿಯಲ್ಲಿ ಸುಮಾರು 1,600 ಮಂದಿಯನ್ನು ಸೆರೆಹಿಡಿದರು ಎಂದು ಪೊಲೀಸ್ ವಕ್ತಾರ ಕಮರುಲ್ ಇಸ್ಲಾಮ್ ತಿಳಿಸಿದರು.
ಬಂಧಿತರ ಪೈಕಿ 37 ಮಂದಿ ಶಂಕಿತ ಐಸಿಸ್ ಉಗ್ರರಾಗಿದ್ದು, ಉಳಿದವರು ಶಂಕಿತ ಅಪರಾಧ ಹಿನ್ನೆಲೆಯವರು ಎಂದರು.